92ನೇ ವಯಸ್ಸಿನಲ್ಲಿ ಅಪ್ಪನಾದ ಈ ವ್ಯಕ್ತಿ ವೈದ್ಯಲೋಕದ ವಿಸ್ಮಯ

ಈ ಸುದ್ದಿಯನ್ನು ಶೇರ್ ಮಾಡಿ

92Year-Old

ಗಾಜಾ, ಫೆ.6– ವಯಸ್ಸಾದಂತೆ ಮಕ್ಕಳನ್ನು ಹುಟ್ಟಿಸುವ ಸಾಮಥ್ರ್ಯ ಕುಸಿಯುತ್ತದೆ, ಫಲವತ್ತತೆ ಕ್ಷೀಣಿಸುತ್ತದೆ ಎಂದು ಹೇಳುವ ವೈದ್ಯಲೋಕಕ್ಕೇ ಸವಾಲಾದ ಸಂಗತಿಯೊಂದು ನಡೆದಿದೆ. ಪ್ಯಾಲೆಸ್ತೇನ್‍ನ ವೆಸ್ಟ್‍ಬ್ಯಾಂಕ್‍ನ ಹೆಬ್ರಾನ್‍ನ ಅಲ್-ಖಲೀಲ್ ನಗರದ ವಾಸಿ 92ರ ವಯೋವೃದ್ಧ ಮಹಮದ್ ಅಲ್ ಅದಮ್ ಮಗುವೊಂದರ ತಂದೆಯಾಗಿದ್ದಾರೆ.  ಹೆಣ್ಣುಮಗುವಿಗೆ ತಮಾರಾ ಎಂದು ನಾಮಕರಣ ಮಾಡಿರುವ ಪ್ಯಾಲೆಸ್ತೀನ್ ಪ್ರಜೆ ಮಹಮದ್, ಇವಳು ನನಗೆ ಅಲ್ಲಾ ನೀಡಿರುವ ಉಡುಗೊರೆ. ಈ ವಯಸ್ಸಿನಲ್ಲಿ ಮಗು ಹುಟ್ಟಿರುವುದಕ್ಕೆ ನನಗೆ ಅಚ್ಚರಿಯಾಗಿದೆ. ನನಗಂತೂ ತುಂಬಾ ಹೆಮ್ಮೆ ಮತ್ತು ಸಂತೋಷವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಏಳು ಪುತ್ರಿಯರು ಮತ್ತು ಐವರು ಪುತ್ರರ ಮಹಮದ್ ಕುಟುಂಬಕ್ಕೆ ತಮಾರಾ ಹೊಸ ಸೇರ್ಪಡೆ. ಈ ಮಗುವಿನ ತಾಯಿ ಅಬೀರ್‍ಗೆ 42 ವರ್ಷಗಳು. ಮಹಮದ್‍ಗಿಂದ 50 ವರ್ಷ ಕಿರಿಯಳು. ಆಕೆ ವಾಕ್-ಶ್ರವಣ ದೋಷಿ. ಕೆಲವು ವರ್ಷಗಳ ಹಿಂದೆ ಮೊದಲ ಪತ್ನಿ ನಿಧನಾನಂತರ ಈಕೆ ಮಹಮದ್‍ಗೆ ಎರಡನೇ ಪತ್ನಿಯಾಗಿದ್ದರು.   ತಾನು ತಾಯಿಯಾಗಿರುವುದು ಅಬೀರ್‍ಗೂ ಸಂತಸ ತಂದಿದೆ. ಇಷ್ಟೊಂದು ವಯಸ್ಸಾಗಿರುವ ಪತಿಯಿಂದ ಮಗುವನ್ನು ಪಡೆಯುವ ಸಣ್ಣ ನಿರೀಕ್ಷೆಯೂ ತನಗೆ ಇರಲಿಲ್ಲ ಎನ್ನುತ್ತಾರೆ ಆಕೆ.   ತನ್ನ ಆರೋಗ್ಯದ ಗುಟ್ಟನ್ನು ಬಯಲು ಮಾಡಿರುವ ಗ್ರೇಟ್ ಫಾದರ್ ಮಹಮದ್, ನಾನು ನೈಸರ್ಗಿಕ ಆಹಾರ ಸೇವಿಸುತ್ತೇನೆ. ದಿನನಿತ್ಯ ವಿವಿಧ ಚಟವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗುತ್ತೇನೆ ಹೇಳಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin