ಐಸ್ ಡ್ಯಾನ್ ಮೂಲಕ ಮೋಡಿ ಮಾಡಿದ 95 ವಯಸ್ಸಿನ ಜಡ್ಜ್..!

ಈ ಸುದ್ದಿಯನ್ನು ಶೇರ್ ಮಾಡಿ

ds

ನ್ಯೂಯಾರ್ಕ್‍ನ ಸ್ಕೈ ರಿಂಗ್ ಹಿಮ ಸ್ಟೇಡಿಯಂನಲ್ಲಿ ವಿಶೇಷ ವ್ಯಕ್ತಿಯೊಬ್ಬರು ಆಗಾಗ ಕಾಣಿಸಿಕೊಂಡು ಸ್ಕೇಟಿಂಗ್ ಮಾಡುತ್ತಾ ಐಸ್ ಡ್ಯಾನ್ಸ್ ಮಾಡುತ್ತಾರೆ. ಈ ಸ್ಪೆಷಲ್ ಪರ್ಸನ್ ಯಾರು? ಅವರ ವೃತ್ತಿ ಏನು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಅದನ್ನು ನೀವೇ ನೋಡಿ.  ಇವರ ಹೆಸರು ರಾಬರ್ಟ್ ಸ್ವೀಟ್. ವಯಸ್ಸು 95 ವರ್ಷ. ವೃತ್ತಿ : ಅಮೆರಿಕದ ನ್ಯೂಯಾರ್ಕ್‍ನ ಫೆಡಲರ್ ಜಡ್ಜ್. ಇವರು ಕಳೆದ 20 ವರ್ಷಗಳಿಂದ ಗಗನಚುಂಬಿ ನಗರಿಯ ಚೆಲ್ಸಿಯಾ ಪಿಯರ್ಸ್‍ನಲ್ಲಿರುವ ಸ್ಕೈ ರಿಂಗ್ ಸ್ಟೇಡಿಯಂನಲ್ಲಿ ಸ್ಕೇಟಿಂಗ್‍ನಲ್ಲಿ ಹಿಮ ನೃತ್ಯ ಮಾಡುತ್ತಾರೆ. ವಾರದಲ್ಲಿ 2 ದಿನ ಈ ನ್ಯಾಯಾಧೀಶರ ಸ್ಕೇಟಿಂಗ್ ಚಮತ್ಕಾರ ಕಂಡು ಜನರು ಬೆರಗಾಗುತ್ತಾರೆ.

ಕ್ರೀಡಾ ಚಟುವಟಿಕೆಗೆ ವಯೋಮಾನ ಅಡ್ಡಿಯಲ್ಲ ಎಂಬುದನ್ನು ಇವರು ಸಾಬೀತು ಮಾಡಿದ್ದಾರೆ. ಇವರ ಪತ್ನಿ ಅಡೇಲಾ ಖ್ಯಾತ ಸ್ಕೇಟರ್. ಎರಡು ದಶಕಗಳ ಹಿಂದೆ ತನ್ನ ಗಂಡನಿಗೆ ಒಂದು ಜೊತೆ ಐಸ್ ಸ್ಕೇಟ್‍ಗಳನ್ನು ಉಡುಗೊರೆ ನೀಡಿದ್ದರು. ಜೊತೆಗೆ ಹಿಮ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಪ್ರೊ ತ್ಸಾಹ ನೀಡಿದರು. ಅವುಗಳ ಒಟ್ಟು ಫಲಿತಾಂಶವೇ ಇಂದಿನ ಈ ದೃಶ್ಯ. ಕೋರ್ಟ್ ರೂಂ ಪ್ರವೇಶಿಸುವುದಕ್ಕೂ ಮುನ್ನ ವಾರದಲ್ಲಿ ಎರಡು ಬಾರಿ ಬೆಳಗ್ಗೆ ನ್ಯಾಯಮೂರ್ತಿ ಅವರು ಸ್ಕೇಟಿಂಗ್ ಮತ್ತು ಐಸ್ ಡ್ಯಾನ್ಸ್ ಮಾಡುತ್ತಾರೆ. ಇದೊಂದು ಉತ್ತಮ ಮತ್ತು ಸೂಕ್ಷ್ಮ ಕ್ರೀಡೆ. ಸ್ಕೇಟ್‍ಗಳ ಮೇಲೆ ಸಮತೋಲನ ಕಾಯ್ದುಕೊಂಡು ಜಾರುತ್ತಾ ನೃತ್ಯ ಮಾಡುವುದು ಸವಾಲಿನ ಕೆಲಸ. ಆರಂಭದಲ್ಲಿ ನನಗೆ ತುಂಬಾ ಭಯವಾಗಿತ್ತು. ಇದು ಸಮತೋಲನ, ವೇಗ ಮತ್ತು ಥ್ರಿಲ್‍ನ ಅದ್ಥುತ ಅನುಭವ ನೀಡುತ್ತದೆ ಎಂದು ರಿಂಗ್‍ನಲ್ಲಿ ರಾಬರ್ಟ್ ಸ್ವೀಟ್ ಹೇಳಿದರು.  ಇವರಿಗೆ ಐಸ್ ಡ್ಯಾನ್ಸ್ ಕೋಚ್ ಮತ್ತು ಎರಡು ಬಾರಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಸ್ಯಾಮ್‍ವೆಲ್ ಗೆಜಾಲಿಯನ್ ವಿಶೇಷ ತರಬೇತಿ ನೀಡಿದ್ದಾರೆ. ರಾಬರ್ಟ್ ಇವರ ಬಳಿ ತರಬೇತಿ ಪಡೆದ ಅತ್ಯಂತ ಹಿರಿಯ ಹಾಗೂ ಅತ್ಯುನ್ನತ ಹುದ್ದೆಯ ವ್ಯಕ್ತಿ.

ds-1

Facebook Comments

Sri Raghav

Admin