ಮಹಾರಾಷ್ಟ್ರ ಎಲೆಕ್ಷನ್ : 142 ಕೋಟಿ ರೂ. ಅನಧಿಕೃತ ನಗದು, 975 ಅಕ್ರಮ ಶಸ್ತ್ರಾಸ್ತ್ರ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಅ.20- ಭಾರೀ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ನೀತಿ ಸಂಹಿತೆ ಜಾರಿ ದಿನಾಂಕದಿಂದ ಈವರೆಗೆ ರಾಜ್ಯದ ವಿವಿಧೆಡೆ ಒಟ್ಟು 142 ಕೋಟಿ ರೂ. ಅನಧಿಕೃತ ನಗದು ಮತ್ತು 975 ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿ ದಿಲೀಪ್ ಶಿಂಧೆ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾದ ನಂತರ ಸೆ.21 ರಿಂದ ರಾಜ್ಯದಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದೆ. ಈ ಅವಧಿಯಲ್ಲಿ 142 ಕೋಟಿ ರೂ. ಅನಧಿಕೃತ ನಗದು ಮತ್ತು 975 ಅಕ್ರಮ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಶಿಂಧೆ ತಿಳಿಸಿದರು. ನಾಳೆ ಮಹಾರಾಷ್ಟ್ರ 288 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಗುರುವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

Facebook Comments