ನೋಟ್ ಬ್ಯಾನ್ ನಂತರ ಶೇ.99.3ರಷ್ಟು ಹಳೆ ನೋಟುಗಳು ಬ್ಯಾಂಕುಗಳಿಗೆ ವಾಪಸ್

ಈ ಸುದ್ದಿಯನ್ನು ಶೇರ್ ಮಾಡಿ

notes-ban

ನವದೆಹಲಿ (ಪಿಟಿಐ), ಆ.29-ಅಮಾನ್ಯೀಕರಣಗೊಂಡ 500 ಮತ್ತು 1,000 ರೂ.ಗಳ ಹಳೆ ನೋಟುಗಳಲ್ಲಿ ಶೇ.99.3ರಷ್ಟು ಕರೆನ್ಸಿಗಳನ್ನು ಬ್ಯಾಂಕ್‍ಗಳಿಗೆ ಹಿಂದಿರುಗಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ತಿಳಿಸಿದೆ.  2016ರ ನವೆಂಬರ್ 8ರಂದು ಮಧ್ಯರಾತ್ರಿಯಿಂದ 500 ಮತ್ತು 1,000 ರೂ.ಗಳ ಮುಖಬೆಲೆಯ ನೋಟುಗಳ ಚಲಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು.

ರದ್ದಾದ ನೋಟುಗಳಲ್ಲಿ ಶೇ.99.3ರಷ್ಟು ಕರೆನ್ಸಿಗಳನ್ನು ಬ್ಯಾಂಕುಗಳಿಗೆ ಹಿಂದಿರುಗಿಸಲಾಗಿದೆ. ನೋಟು ಅಮಾನ್ಯೀಕರಣಕ್ಕೂ ಮುನ್ನ ದೇಶದಲ್ಲಿ 15.41 ಲಕ್ಷ ಕೋಟಿ ರೂ.ಗಳ ಕರೆನ್ಸಿಗಳು ಚಲಾವಣೆಯಲ್ಲಿದ್ದವು. ಈಗ 15.31 ಲಕ್ಷ ಕೋಟಿ ರೂ.ಗಳ ಮೌಲ್ಯದ ಹಳೆ ನೋಟುಗಳನ್ನು ಹಿಂದಿರುಗಿಸಲಾಗಿದೆ ಎಂದು ಆರ್‍ಬಿಐ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.  ನಿರ್ದಿಷ್ಟ ಬ್ಯಾಂಕ್ ನೋಟುಗಳ ಸಂಸ್ಕರಣೆ ಮತ್ತು ಪರಿಶೀಲನೆ ಅತಿ ಪ್ರಯಾಸದಾಯಕ ಕಾರ್ಯವಾಗಿತ್ತು. ಇದರಲ್ಲಿ ಯಶಸ್ಸು ಸಾಧಿಸಲಾಗಿದೆ ಎಂದು ಆರ್‍ಬಿಐ ತಿಳಿಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin