ಹಾಸನದಲ್ಲಿ ಎ.ಮಂಜು ಸೋಲಿಗೆ ಅಸಲಿ ಕಾರಣವೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ,ಮೇ 24- ರಾಜಕೀಯ ನಾಯಕರು ಕೆಲವು ಸಂಧರ್ಭದಲ್ಲಿ ತೆಗೆದುಕೊಂಡ ಕೆಟ್ಟ ನಿರ್ಧಾರ ಅವರ ರಾಜಕೀಯ ಜೀವನಕ್ಕೆ ಮಾರಕವಾದ ಹಲವು ಉದಾಹರಗಳಿವೆ ಇವುಗಳ ಸಾಲಿಗೆ ಎ.ಮಂಜು ಅವರ ನಡೆಯು ಸೇರಿದಂತಾಗಿದೆ.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಹಾಸನ ಲೋಕಸಭಾ ಚುನಾವಣೆ ಎದುರಿಸಿದ ಎ.ಮಂಜು ದೇವೇಗೌಡರ ಮೊಮ್ಮಗ ಪ್ರಜ್ವಲï ವಿರುದ್ಧ ಸೋಲು ಕಂಡಿದ್ದಾರೆ ಅವರ ಇಂದಿನ ಈ ಪರಿಸ್ಥಿತಿಯೂ ಜಿಲ್ಲಾ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯ ಆದರೆ ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಹಲವು ವರ್ಷ ಶಾಸಕರಾಗಿ ಸಚಿವರಾಗಿ ಸೇವೆ ಸಲ್ಲಿಸಿದ ಬಳಿಕವು ಸೋಲೆಂಬುದು ಮಂಜು ಬೆನ್ನು ಬಿಡಲಿಲ್ಲಾ.

ಕಳೆದ ಬಾರಿ ಎಚ್.ಡಿ.ದೇವೇಗೌಡರ ವಿರುದ್ಧ ಒಂದು ಲಕ್ಷ ಮತಗಳಿಂದ ಸೋಲು ಕಂಡಿದ್ದ ಮಂಜು ಇಂದು ಅವರ ಮೊಮ್ಮಗ ಪ್ರಜ್ವಲ್ ವಿರುದ್ದ ಭಾರೀ ಅಂತರದ 1.42 ಲಕ್ಷ ಮತಗಳಿಂದ ಸೋಲು ಕಂಡಿದ್ದಾರೆ. ಈ ಮೂಲಕ ರಾಜಕೀಯ ಜೀವನದಲ್ಲಿ ತೀವ್ರ ಹಿನ್ನಡೆಯನ್ನು ಅನುಭವಿಸಿದಂತಾಗಿದೆ ಎನ್ನಬಹುದು.

ರಾಜ್ಯ ಕಾಂಗ್ರೆಸ್ ನಾಯಕರ ಮೈತ್ರಿ ಕಾರಣ ಈ ಸೋಲು ಅನುಭವಿಸಿದಂತಾಗಿದೆ ಎಂಬ ಕಾರಣ ನೀಡಿದರೂ ಸಹ ಜಿಲ್ಲಾ ರಾಜಕೀಯ ಕ್ಷೇತ್ರದ ಜೆಡಿಎಸ್ ಭದ್ರ ಕೋಟೆಗೆ ಯಾವುದೇ ಧಕ್ಕೆ ಮಾಡಲು ಸಾಧ್ಯವಿಲ್ಲಾ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ ಎನ್ನಬಹುದು.

ಕಡೆ ಪಕ್ಷ ಕೇತ್ರದಲ್ಲಿ ಮೈತ್ರಿ ಧರ್ಮ ಪಾಲಿಸದೆ ಎ.ಮಂಜು ಕಾಂಗ್ರೆಸ್ ಟಿಕೆಟ್ ಪಡೆದಿದ್ದರೆ ಗೆಲುವು ನಿಶ್ಚಿತ ಎಂಬ ಮಾತು ಕೇಳಿ ಬರುತ್ತಿದೆ ಅಥವಾ ಕಾಂಗ್ರೆಸ್ ಪಕ್ಷದಿಂದ ಯಾರೊಬ್ಬರು ಅಭ್ಯರ್ಥಿ ಸ್ಪರ್ಧೆ ಮಾಡಿದ್ದರು ಮತಗಳು ಹಂಚಿಹೊಗುವ ಮೂಲಕ ಎ.ಮಂಜು ಗೆಲುವು ಸುಲಭ ವಾಗುತ್ತಿತ್ತು ಎಂಬ ವಾದವು ಕೇಳಿಬರುತ್ತಿದೆ .

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಂಜು ಮುಂದಿನ ರಾಜಕೀಯ ಹೆಜ್ಜೆಯನ್ನು ಸೂಕ್ಷ್ಮ ವಾಗಿ ಗಮನಿಸಿ ಮುನ್ನಡೆಯ ಬೇಕಿತ್ತು ಆದರೆ ಈ ಬಾರಿಯ ಚುನಾವಣೆಯಲ್ಲಿ ಮತ್ತೊಮ್ಮೆ ಸೋಲು ಕಂಡಿದ್ದಾರೆ.

ಈ ಮೂಲಕ ಜಿಲ್ಲಾ ರಾಜಕೀಯದ ಮಟ್ಟಿಗೆ ಹಿನ್ನಡೆ ಅನುಭವಿಸಿದಾಂತಾಗಿದೆ. ಇಂದಿನ ಫಲಿತಾಂಶ ಏನೇ ಇದ್ದರು ಎ.ಮಂಜು ರಾಜಕೀಯವಾಗಿ ತೆಗೆದುಕೊಂಡ ಹಲವು ನಿರ್ಧಾರ ಅವರ ರಾಜಕೀಯ ಜೀವನಕ್ಕೆ ಮಾರಕವಾಗಿ ಪರಿಗಣಿಸಿ ಲೋಕಸಭಾ ಚುನಾವಣೆಯಲ್ಲೂ ಸೋಲು ಕಾಣುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಮೇಲಿನ ಮಾತಿನಂತೆ ನಿಜವಾಗಿರುವುದಂತು ತಳ್ಳಿಹಾಕುವಂತ್ತಿಲ್ಲಾ ಎಂದು ಹೇಳಬಹುದು.

ಎ.ಮಂಜು ಸ್ಥಳೀಯ ಸಂಸ್ಥೆ ಮಟ್ಟಡ ರಾಜಕೀಯ ಮಾಡುತ್ತ ರಾಜ್ಯ ಸರ್ಕಾರದ ಸಚಿವ ಸಂಪುಟ ಸಚಿವರಾಗುವ ವರೆಗೆ ಬೆಳೆದು ಇಂದು ಸತತ ಸೋಲು ಕಾಣುವಂತಹ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣ ಅವರ ದಿಡುಕಿನ ನಿರ್ಧಾರವೆ ಕಾರಣ ಎನ್ನಬಹುದು.

ಲೋಕಸಭಾ ಚುನಾವಣಾ ಸ್ಪರ್ಧೆ ಗೆ ಕಾಂಗ್ರೆಸï ತೊರೆದು ಬಿಜೆಪಿ ಸೇರಿದ ಎ.ಮಂಜು ಮುಂದೆಯೂ ಅದೇ ಪಕ್ಷದಲ್ಲಿ ಮುಂದು ವರೆಯುವರೆ ಹಾಗೂ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಬಲವರ್ಧನೆಗೆ ಶ್ರಮಿಸುವರೆ ಎಂದು ಕಾದುನೋಡಬೇಕಿದೆ.

– ಸಂತೋಷ್ ಸಿ ಬಿ .ಹಾಸನ

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin