ರಸಗೊಬ್ಬರ ಖರೀದಿಸಲು ಆಧಾರ್ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

Fertiliser

ಬೆಂಗಳೂರು ಗ್ರಾಮಾಂತರ, ಜೂ.28-ನೇರ ನೆರವು ವರ್ಗಾವಣೆ (ಡಿಬಿಟಿ) ಯೋಜನೆಯಡಿ ರಸಗೊಬ್ಬರ ಖರೀದಿಸುವ ರೈತರು ಕಡ್ಡಾಯವಾಗಿ ಆಧಾರ್ ಪ್ರತಿಯನ್ನು ಹೊಂದಿರಬೇಕು. ಸ್ವಂತ ಜಮೀನನ್ನು ಹೊಂದಿರುವ ರೈತರ ಪರವಾಗಿ ಖರೀದಿಸುವವರು ಜಮೀನು ಹೊಂದಿದ ರೈತರ ಹಾಗೂ ತಮ್ಮ ಆಧಾರ್ ಪ್ರತಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಕೇಂದ್ರ ಸರ್ಕಾರದಿಂದ ನಿಗದಿಯಾದ 45 ಕೆ.ಜಿ ತೂಕದ ಯೂರಿಯಾ ರಸಗೊಬ್ಬರ ಚೀಲಗಳನ್ನು ಪೂರೈಸಲಾಗುವುದು. ಚಿಲ್ಲರೆ ರಸಗೊಬ್ಬರ ಮಾರಟಗಾರರು ಪಾಸ್ ಉಪಕರಣದ ಮುಖಾಂತರವೇ ರಸಗೊಬ್ಬರವನ್ನು ಮಾರಾಟ ಮಾಡಬೇಕು. ಇಲ್ಲವಾದಲ್ಲಿ ಅಂತಹ ಮಾರಾಟಗಾರರ ಪರವಾನಗಿ ರದ್ದುಪಡಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin