KXIP vs DC : ಗೇಲ್ ಕೈಬಿಟ್ಟರೆ ಕಿಂಗ್ಸ್ ಗೆ ಗೆಲುವು

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ಸೆ.20- ಕೆರಿಬಿಯನ್‍ನ ಸ್ಫೋಟಕ ಆಟಗಾರ ಕ್ರಿಸ್‍ಗೇಲ್‍ರನ್ನು ಕೈಬಿಟ್ಟರೆ ಕೆ.ಎಲ್.ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲುವು ಸಾಧಿಸುತ್ತದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.

ಕ್ರಿಸ್‍ಗೇಲ್ ಐಪಿಎಲ್‍ನಲ್ಲಿ ಸಾಕಷ್ಟು ದಾಖಲೆಯನ್ನು ಮಾಡಿದ್ದಾರಾದರೂ ಇತ್ತೀಚೆಗೆ ಅವರು ಉತ್ತಮ ಫಾರ್ಮ್‍ನಲ್ಲಿಲ್ಲ, ಆದ್ದರಿಂದ ಅವರನ್ನು ಕೈ ಬಿಟ್ಟು ಉತ್ತಮ ಫಾರ್ಮ್‍ನಲ್ಲಿರುವ ಅಲ್‍ರೌಂಡರ್‍ಗಳಾದ ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್‍ವೆಲ್, ಮುಜುಬಲ್ ರೆಹಮಾನ್, ಕ್ರಿಸ್‍ಜೋಡನ್‍ಗೆ ಸ್ಥಾನ ಕಲ್ಪಿಸಿದರೆ ತಂಡವು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸದೃಢಗೊಂಡು ಎದುರಾಳಿ ಡೆಲ್ಲಿ ಕ್ಯಾಪಿಕ್ಟಲ್ಸ್‍ಗೆ ಸುಲಭವಾಗಿ ಸೋಲುಣಿಸಬಹುದು ಎಂದು ಅವರು ಹೇಳಿದ್ದಾರೆ.

ಅದೇ ರೀತಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಅಜೆಂಕಾ ರಹಾನೆ ಹೊರ ನಡೆದರೆ ಒಳಿತು ಎಂದು ಹೇಳಿದ್ದಾರೆ. ಡೆಲ್ಲಿ ಪರ ಆರಂಭಿಕರಾಗಿ ಶಿಖರ್ ಧವನ್ ಹಾಗೂ ಪೃಥ್ವಿಶಾ ಕಣಕ್ಕಿಳಿದರೆ ಮೂರನೇ ಕ್ರಮಾಂಕದಲ್ಲಿ ರಹಾನೆ ಮೈದಾನಕ್ಕಿಳಿದರೆ ಆಗ ನಾಯಕ ಶ್ರೇಯಾಸ್ ಐಯ್ಯರ್, ರಿಷಭ್‍ಪಂತ್, ಹೆಟ್ಮೆಯರ್ ಕ್ರಮವಾಗಿ 4, 5 ಮತ್ತು 6ನೆ ಕ್ರಮಾಂಕದಲ್ಲಿ ಇಳಿಯಬೇಕಾಗುತ್ತದೆ. ಆಗ ಬ್ಯಾಟಿಂಗ್‍ನಲ್ಲಿ ಹಿನ್ನಡೆ ಅನುಭವಿಸಬೇಕಾಗುತ್ತದೆ.

ರಹಾನೆಯನ್ನು ಕೈಬಿಟ್ಟು ಹೆಚ್ಚುವರಿ ಅಲೌಂಡರ್ ಅನ್ನು ತಂಡಕ್ಕೆ ಸೇರಿಸಿಕೊಂಡರೆ ಐಯ್ಯರ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಬಹುದು ಎಂದು ಚೋಪ್ರಾ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

Facebook Comments