ಎಬಿಡಿಗೆ @ 37

ಈ ಸುದ್ದಿಯನ್ನು ಶೇರ್ ಮಾಡಿ

ಕೇಪ್‍ಟೌನ್, ಫೆ.17- ಕ್ರಿಕೆಟ್ ರಂಗದಲ್ಲಿ ಮಿಸ್ಟರ್ 360 ಎಂದೇ ಬಿಂಬಿಸಿಕೊಂಡಿರುವ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ, ರಾಯಲ್‍ಚಾಲೆಂಜರ್ಸ್ ಬೆಂಗಳೂರಿನ ಸ್ಫೋಟಕ ಆಟಗಾರ ಎಬಿಡಿವಿಲಿಯರ್ಸ್‍ಗೆ ಇಂದು 37ರ ಜನ್ಮದಿನದ ಸಂಭ್ರಮ. ದಕ್ಷಿಣ ಆಫ್ರಿಕಾದ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಎಬಿಡಿವಿಲಿಯರ್ಸ್‍ಗೆ ಅಪಾರ ಅಭಿಮಾನಿಗಳ ಬಳಗವೇ ಇದ್ದು ಇಂದು ತಮ್ಮ ನೆಚ್ಚಿನ ಆಟಗಾರನ ಹುಟ್ಟುಹಬ್ಬವನ್ನು ಆಚರಿಸಿರುವುದೇ ಅಲ್ಲದೆ ತಮ್ಮ ಮೆಚ್ಚಿನ ಆಟಗಾರನಿಗೆ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಎಬಿಡಿ ಹುಟ್ಟುಹಬ್ಬಕ್ಕೆ ಆರ್‍ಸಿಬಿ ನಾಯಕ ವಿರಾಟ್ ಕೊಹ್ಲಿ, ಚೆನ್ನೈ ಸೂಪರ್ ಕಿಂಗ್ಸ್‍ನ ಆಟಗಾರ ಸುರೇಶ್‍ರೈನಾ, ಆರ್‍ಸಿಬಿ ಫ್ರಾಂಚೈಸಿಗಳು, ಎಬಿಡಿಯೊಂದಿಗೆ ಅಂಗಳ ಹಂಚಿಕೊಂಡಿದ್ದ ಕೆಲವು ಹಾಲಿ ಹಾಗೂ ಮಾಜಿ ಆಟಗಾರರು ಕೂಡ ಎಬಿವಿಲಿಯರ್ಸ್‍ರೊಂದಿಗೆ ತಾವು ಕಳೆದ ಕೆಲವು ಅದ್ಭುತ ಕ್ಷಣಗಳನ್ನು ತಮ್ಮ ಟ್ವಿಟ್ಟರ್‍ಗಳಲ್ಲಿ ಮೆಲುಕು ಹಾಕುವ ಮೂಲಕ ಶುಭಾಶಯ ಕೋರಿದ್ದಾರೆ.

ಎಬಿಡಿ ಬಗ್ಗೆ ಕೆಲವು ರೋಚಕ ಸಂಗತಿಗಳು:
* ಕ್ರಿಕೆಟ್ ಅಂಗಳದಲ್ಲಿ ಮಿಂಚುವ ಮೊದಲು ಎಬಿಡಿವಿಲಿಯರ್ಸ್ ಅವರು ಕಿರಿಯರ ಹಾಕಿ ಹಾಗೂ ಫುಟ್ಬಾಲ್ ತಂಡಗಳಲ್ಲಿ ಗುರುತಿಸಿಕೊಂಡಿದ್ದರು.
* ದಕ್ಷಿಣ ಆಫ್ರಿಕಾ ತಂಡದ ನಾಯಕತ್ವವನ್ನು ವಹಿಸಿಕೊಳ್ಳು ವುದಕ್ಕೂ ಮುಂಚೆಯೇ ಎಬಿಡಿ ದಕ್ಷಿಣ ಆಫ್ರಿಕಾದ ತಂಡದ ಕಿರಿಯ ರಗ್ಬಿ ತಂಡದ ನಾಯಕನಾಗಿಯೂ ಗುರತಿಸಿಕೊಂಡಿದ್ದರು.
* ಉತ್ತಮ ಈಜುಪಟು ವಾಗಿ ರುವ ಎಬಿಡಿ ಶಾಲಾ ಜೀವನದಲ್ಲೇ 6 ದಾಖಲೆಗಳನ್ನು ದಾಖಲಿಸಿದ್ದರು.
* ಜೂನಿಯರ್ ಅಥ್ಲಿಟಿಕ್ಸ್‍ನಲ್ಲಿ 100 ಮೀಟರ್, ಕಿರಿಯರ ಡೇವಿಸ್ ಕಪ್, ಅಂಡರ್-19 ಬ್ಯಾಡ್ಮಿಂಟನ್, ಗಾಲ್ಫ್ ಕ್ರೀಡಾಕೂಟಗಳಲ್ಲಿ ಎಬಿಡಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದರು.
* ಉತ್ತಮ ಸಂಗೀತಗಾರರು ಆಗಿರುವ ಮಿಸ್ಟರ್ 360 ಎಬಿಡಿ ವಿಲಿಯರ್ಸ್‍ಗೆ ಕನ್ನಡದ ವರನಟ ಡಾ.ರಾಜ್‍ಕುಮಾರ್‍ರವರ ಗೀತೆಗಳೆಂದರೆ ಪಂಚಪ್ರಾಣ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ನಡೆಯುವಾಗ ಡಾ.ರಾಜ್‍ರ ಗೀತೆಗಳನ್ನು ಹಾಡುವ ಮೂಲಕ ಕನ್ನಡಿಗರ ಹೃದಯವನ್ನು ಗೆದ್ದಿದ್ದಾರೆ.

ಕ್ರಿಕೆಟ್ ಜೀವನದಲ್ಲಿ ಎಬಿಡಿ:
ಟೆಸ್ಟ್:114 ಪಂದ್ಯ, 8765 ರನ್, 22 ಶತಕ, 46 ಅರ್ಧಶತಕ, ಗರಿಷ್ಠ- ಅಜೇಯ 278 ರನ್
ಏಕದಿನ:228 ಪಂದ್ಯ, 9577 ರನ್, 25 ಶತಕ, 53 ಅರ್ಧಶತಕ, ಗರಿಷ್ಠ- 176 ರನ್
ಟ್ವೆಂಟಿ-20: 78 ಪಂದ್ಯ, 1672 ರನ್, 10 ಅರ್ಧಶತಕ. ಗರಿಷ್ಠ- ಅಜೇಯ 79 ರನ್.
ಐಪಿಎಲ್: 169 ಪಂದ್ಯ, 4849 ರನ್, ಶತಕ-3, ಅರ್ಧಶತಕ-38, ಗರಿಷ್ಠ- ಅಜೇಯ 133ರನ್.

Facebook Comments