ದೇಶಕ್ಕೆ ದೊಡ್ಡ ಅಪಾಯ ಕಾದಿದೆ..! : ಅಬ್ದುಲ್ ಅಜೀಂ

ಈ ಸುದ್ದಿಯನ್ನು ಶೇರ್ ಮಾಡಿ

ಪೌರತ್ವ ಕಾಯ್ದೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಯುವತಿ ಅಮೂಲ್ಯ ಪಾಪಿ ದೇಶವಾದ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ಲು..! ವೇದಿಕೆಯಲ್ಲಿ ಸಂಸದ ಅಸಾದುದ್ದೀನ್ ಓವೈಸಿಕೂಡ ಉಪಸ್ಥಿತನಿದ್ದ..! ಘಟನೆ ಸೂಕ್ಷ್ಮತೆ ಅರಿತ ಪೊಲೀಸ್ರು ಆಕೆಯನ್ನು ವಶಕ್ಕೆ ಪಡೆದರು.

ಇದೀಗ ಘಟನೆ ಖಂಡಿಸಿ ದೇಶವ್ಯಾಪ್ತಿ ಖಂಡನೆ ವ್ಯಕ್ತವಾಗಿದೆ. ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯಳ ವಿರುದ್ಧ ಹಾಗೂ ಸಂಘಟನೆ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈಗಾಗಲೇ ಯುವತಿ ಅಮೂಲ್ಯಳನ್ನು 14ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇಷ್ಟಕ್ಕೂ ಪೌರತ್ವ ಕಾಯ್ದೆ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗಳು ದೇಶದ್ರೋಹದಂತಹ ಸ್ವರೂಪ ಪಡೆದುಕೊಳ್ಳುತ್ತಿರುವುದರ ಹಿಂದೆ ಒಂದು ದೊಡ್ಡ ಜಾಲವೇ ಇದೆ. ಮುಸ್ಲಿಂ ಹಾಗೂ ದಲಿತ ಯುವಕರನ್ನು ದಿಕ್ಕುತಪ್ಪಿಸುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿದೆ. ‘ಸಂವಿಧಾನ’ ಅಂದ್ರೆ ಏನು..? ‘ಕಾನೂನು’ ಏನು ಹೇಳುತ್ತದೆ ಎಂಬ ಕನಿಷ್ಠ ಅರಿವು ಇಲ್ಲದವರು ಪ್ರತಿಭಟನೆಗೆ ಇಳಿಯುತ್ತಿರುವುದರ ಹಿಂದೆ ‘ಮುಸ್ಲಿಂ’ ಯುವಕರನ್ನು ದಿಕ್ಕುತಪ್ಪಿಸುವ ಹುನ್ನಾರ ಮಾಡಲಾಗುತ್ತಿದೆ.

ಇದರಿಂದ ‘ದೇಶಕ್ಕೆ ದೊಡ್ಡ ಅಪಾಯವೇ ಕಾದಿದೆ’ ಎಂದು ನಿವೃತ್ತ ಪೊಲೀಸ್ ಅಧಿಕಾರಿ, ಮಾಜಿ ಎಂ.ಎಲ್.ಸಿ., ಹಾಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ‘ಅಬ್ದುಲ್ ಅಜೀಂ’ ಅವರು ತಮ್ಮ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಪೌರತ್ವ ಕಾಯ್ದೆ ಎಂದರೇ ಏನು..? ಭಾರತೀಯ ಮುಸಲ್ಮಾನರಿಗೆ ನಿಜಕ್ಕೂ ಈ ಕಾಯ್ದೆಯಿಂದಾಗಿ ಅಪಾಯ ಇದೆಯೇ..? ಇಲ್ಲವೇ.? ಎಂಬುದರ ಕುರಿತಾಗಿ ಇಂಚಿಂಚು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಇಷ್ಟಕ್ಕೂ ಅಬ್ದುಲ್ ಅಜೀಂ ಅವರು ಭಾರತೀಯ ಮುಸಲ್ಮಾನರಿಗೆ ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿದ್ದರೇ ಈ ಸಂದರ್ಶನವನ್ನು ನೋಡಿ.

_ಭಾಸ್ಕರ್ ತೋಟಗೆರೆ

Facebook Comments

Sri Raghav

Admin