ದೇಶದ ಮೊದಲ ಭಯೋತ್ಪಾದಕ ಅಬ್ದುಲ್ ರಶೀದ್, ಗೋಡ್ಸೆಯಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

– ಮಹಾಂತೇಶ್ ಬ್ರಹ್ಮ

ಸ್ವಾಮಿ ಶ್ರದ್ಧಾನಂದ, ಈ ಹೆಸರು ತುಂಬಾ ಜನರಿಗೆ ಗೊತ್ತಿಲ್ಲ. ಇವರೊಬ್ಬ ಕಟ್ಟಾ ಹಿಂದು ಪ್ರತಿಪಾದಕ,ಸಮಾಜ ಸುಧಾರಕ,ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೋರಾಟ ಮಾಡಿದ ಮಹಾನ್ ನಾಯಕ, ಈಗಿನ ಹರಿದ್ವಾರದಲ್ಲಿರುವ ಗುರುಕುಲ ಕಾಂಗ್ರಿ ವಿಶ್ವವಿದ್ಯಾಲಯದ ಸಂಸ್ಥಾಪಕ, ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಕ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದ ವಕೀಲ.

ಹಿಂದುತ್ವದ ಉಳಿವಿಗಾಗಿ ತನ್ನ ವೈವಾಹಿಕ ಜೀವನವನ್ನೇ ತ್ಯಾಗ ಮಾಡಿ ಖಾವಿ ದೀಕ್ಷೆ ತೊಟ್ಟ ದೊಡ್ಡ ಸಂತ. 1922 ರಲ್ಲಿ ಡಾ:ಅಂಬೇಡ್ಕರ್ ಇವರ ಬಗ್ಗೆ ಪತ್ರಿಕೆಗಳಿಗೆ ಹೇಳಿಕೆ ಕೊಡುತ್ತಾರೆ ಅದೇನೆಂದರೆ swami shraddananda is the greatest and most sincere champion of the untouchables….ಇಂತಹ ಸಮಾಜ ಸುಧಾರಕ ದೊಡ್ಡ ಸನ್ಯಾಸಿಯನ್ನು ಇಸ್ಲಾಂ ಭಯೋತ್ಪಾದಕ ಗುಂಡೇಟಿನಿಂದ ದೆಹಲಿಯಲ್ಲಿ ಹತ್ಯೆ ಮಾಡಿದ್ದು ಈ ದೇಶದ ದೊಡ್ಡ ದುರಂತ.

ಮುಸ್ಲಿಂ ಸಮಾಜವನ್ನು ಓಲೈಸುವ ಏಕೈಕ ಕಾರಣದಿಂದ ಆ ಭಯೋತ್ಪಾದಕನನ್ನು ಆತ ನನ್ನ ತಮ್ಮ ಇದ್ದ ಹಾಗೇ ಆದದ್ದು ಆಗಿ ಹೋಯಿತು ಕ್ಷಮಿಸಿಬಿಡಿ ಎಂದು ಹತ್ಯೆಯನ್ನು ಸಮರ್ಥನೆ ಮಾಡಿಕೊಂಡ ಮಹಾತ್ಮ ಗಾಂಯವರ ನಡೆ ಮತ್ತೊಂದು ದೊಡ್ಡ ದುರಂತ..

22 ಫೆಬ್ರವರಿ 1856 ರಂದು ಪಂಜಾಬಿನ ಜಲಾಂದರ್ ಸಮೀಪದ ತಲ್ವನ್ ನಲ್ಲಿ ಮುನ್ಷಿ ರಾಮ್ ಹುಟ್ಟುತ್ತಾರೆ ಇವರ ತಂದೆ ಲಾಲ್ ನಾಯಕ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದಲ್ಲಿದ್ದ ಉತ್ತರ ಪ್ರದೇಶದ ಯುನೈಟೆಡ್ ಪ್ರಾವಿನ್ಸï ನಲ್ಲಿ ಪೊಲೀಸ್ ಅಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ.

ಇವರಿಗೆ ಸಾಧು ಸಂತರ ಮೇಲೆ ಅಪಾರ ಗೌರವ.ಒಮ್ಮೆ ಉತ್ತರ ಪ್ರದೇಶದ ಬರೇಲಿಯಲ್ಲಿ ಆರ್ಯ ಸಮಾಜದ ಸನ್ಯಾಸಿ ದಯಾನಂದ ಸರಸ್ವತಿಯವರ ದೊಡ್ಡ ಪ್ರವಚನ ಏರ್ಪಾಡಾಗಿರುತ್ತದೆ.ಅವರ ಪ್ರವಚನ ಕೇಳಲು ಬ್ರಿಟೀಷ್ ದೊಡ್ಡ ದೊಡ್ಡ ಅಕಾರಿಗಳು ಅದರಲ್ಲಿ ಭಾಗವಹಿಸಿರುತ್ತಾರೆ.ಆದ್ದರಿಂದ ಅಲ್ಲಿ ರಕ್ಷಣೆಯ ದೃಷ್ಟಿಯಿಂದ ಬಂದೋಬಸ್ತ್ ಜವಾಬ್ದಾರಿಯನ್ನು ಲಾಲ್ ನಾಯಕ್ ಹೊತ್ತಿರುತ್ತಾರೆ.

ಪ್ರವಚನ ಕೇಳಿಸಲು ಜೊತೆಗೆ ತಮ್ಮ ಮುದ್ದಿನ ಮಗ ಮುನ್ಷಿ ರಾಮ್ ನನ್ನು ಸಹ ಕರೆದುಕೊಂಡು ಹೋಗಿರುತ್ತಾರೆ.ಅಲ್ಲಿ ದಯಾನಂದ ಸರಸ್ವತಿಯವರ ಪ್ರವಚನ ಕೇಳಿದ ಮುನ್ಷಿರಾಮ್ ಬಹಳ ಪ್ರಭಾವಿತರಾಗುತ್ತಾರೆ. 1917ರಲ್ಲಿ ಸನ್ಯಾಸತ್ವ ಸ್ವೀಕಾರ ಮಾಡಿದ ಮುನ್ಷಿರಾಮ್ ,ಸ್ವಾಮಿ ಶ್ರದ್ಧಾನಂದರಾಗಿ ಬದಲಾಗುತ್ತಾರೆ.ಹಿಂದು ಸುಧಾರಣಾ ಚಳುವಳಿಯ ಸದಸ್ಯರಾಗುತ್ತಾರೆ.

ತಾಯಿ ಭಾರತ ಮಾತೆಯನ್ನು ಬ್ರಿಟೀಷರ ಕಪಿ ಮುಷ್ಟಿಯ ಬಂಧನದಿಂದ ಬಿಡುಗಡೆಗೊಳಿಸಲು ಕಾಂಗ್ರೆಸ್ ಸೇರಿ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕುತ್ತಾರೆ. ಅದೇ ಸಮಯದಲ್ಲಿ 13 ಏಪ್ರಿಲ್ 1919ರಂದು ಒಂದು ದೊಡ್ಡ ದುರಂತವೇ ನಡೆಯುತ್ತದೆ.

ಅಮೃತಸರದ ಜಲಿಯನ್ ವಾಲಾಬಾಗ್ ನಲ್ಲಿ ಸ್ವಾತಂತ್ರ್ಯಕ್ಕಾಗಿ ಬಹಳ ಶಾಂತಿಯಿಂದ ಹೋರಾಟ ನಡೆಸುತ್ತಿದ್ದವರ ಮೇಲೆ ಬ್ರಿಟೀಷರ ಭೂ ಸೇನಾ ಮುಖ್ಯಸ್ಥ ಜನರಲ್ ಡಯರ್ ಮತ್ತು ಅವನ ಸೈನಿಕರು ಅಲ್ಲಿದ್ದವರ ಮೇಲೆ ಗುಂಡಿನ ಸುರಿಮಳೆಗೈದು ದೊಡ್ಡ ನರಮೇಧವೇ ನಡೆಸಿಬಿಡುತ್ತಾರೆ.

ನೂರಾರು ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾಗುತ್ತಾರೆ. ಇದರಿಂದ ಬಹಳ ನೊಂದು ಹೋದ ಸ್ವಾಮಿ ಶ್ರದ್ಧಾನಂದಾರು ಜಲಿಯನ್ ವಾಲ್ ಬಾಗ್ ಹತ್ಯಾಕಾಂಡದ ನರಮೇಧದ ವಿಚಾರವನ್ನು ದೇಶದ ಉದ್ದಗಲಕ್ಕೆ ತಲುಪಿಸಲು ಸಭೆ ಮಾಡಲು ತೀರ್ಮಾನಿಸುತ್ತಾರೆ. ಆದರೆ ಇದಕ್ಕೆ ಯಾವೊಬ್ಬ ಕಾಂಗ್ರೆಸ್ ಸದಸ್ಯರು ಒಪ್ಪುವುದೇ ಇಲ್ಲ. ಯಾರೊಬ್ಬರೂ ಒಪ್ಪಬಾರದೆಂದು ತುಂಬಾ ಗೂಢವಾಗಿ ಆದೇಶ ಮಾಡಿ ಮಹಾತ್ಮ ಗಾಂಯವರು ಮËನ ವಹಿಸಿಬಿಟ್ಟಿರುತ್ತಾರೆ.

ಆದರೆ ಅದ್ಯಾವುದಕ್ಕು ತಲೆ ಕೆಡಿಸಿಕೊಳ್ಳದ ಶ್ರದ್ಧಾನಂದರು ಕಾಂಗ್ರೆಸ್ ಸಭೆ ಮಾಡಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಇಡೀ ದೇಶಕ್ಕೆ ತಲುಪುವಂತೆ ಮಾಡುತ್ತಾರೆ. ಆಗಲೇ ನೋಡಿ ಗಾಂೀಯವರಿಗೆ ಇವರ ಮೇಲೆ ಮುನಿಸು ಶುರುವಾಗುತ್ತದೆ.ಇಷ್ಟಕ್ಕೇ ನಿಲ್ಲದ ಸ್ವಾಮಿಯವರು ಹಿಂದು ಧರ್ಮದ ರಕ್ಷಣೆಗೂ ಪಣ ತೊಡುತ್ತಾರೆ.

ದೇಶದ ತುಂಬಾ ಹಿಂದು ಸಂಘಟನಾ ಚಳುವಳಿ ಕಾರ್ಯಕ್ರಮಗಳನ್ನು ನಡೆಸಿ ಅನೇಕ ಸಾಧು ಸಂತರನ್ನು ಕರೆತರುತ್ತಾರೆ. ಭಾರತೀಯ ಹಿಂದು ಶುದ್ದಿ ಸಭಾ ಮಾಡಿ ಅದರ ಅಧ್ಯಕ್ಷತೆ ವಹಿಸಿಕೊಳ್ಳುತ್ತಾರೆ.ಮುಸ್ಲಿಂ. ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ ಹಿಂದೂಗಳನ್ನು ಘರ್ ವಾಪಾಸಿ ಎಂಬ ಸ್ಲೋಗನ್‍ನೊಂದಿಗೆ ಅವರೆಲ್ಲರನ್ನೂ ಹಿಂದು ಧರ್ಮಕ್ಕೆ ಮರು ಮತಾಂತರ ಮಾಡುತ್ತಾರೆ.

ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಪತ್ರಿಕೆಗಳನ್ನು ಸ್ಥಾಪಿಸಿ ನಿರಂತರವಾಗಿ ಹಿಂದು ಧರ್ಮದ ಶ್ರೇಷ್ಟತೆಯ ಬಗ್ಗೆ ಅನೇಕ ಲೇಖನಗಳನ್ನು ಬರೆದು ಬೇರೆ ಧರ್ಮಗಳಿಗೆ ಮತಾಂತರವಾಗುವುದನ್ನು ತಡೆಯುತ್ತಾರೆ. ಪ್ರವಚನ ಕೊಡುತ್ತಾರೆ.

ಇವರ ಪ್ರವಚನ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿತ್ತೆಂದರೆ ದೆಹಲಿಯ ಜಮ ಮಸೀದಿಯಿಂದ ಮುಸಲ್ಮಾನರು ಇವರ ಪ್ರವಚನ ಕೇಳಲು ಬರುತ್ತಾರೆ.
ಆಗಲೇ ನೋಡಿ ಮಹಾತ್ಮ ಗಾಂೀಯವರಿಗೆ ಇರುಸು-ಮುರುಸು ಶುರು ಆಗುತ್ತದೆ.ಅದ್ಯಾರ ಕೈವಾಡವೋ ಪಿತೂರಿಯೋ ಗೊತ್ತಿಲ್ಲ.

ಸ್ವಾಮಿ ಶ್ರದ್ಧಾನಂದರ ಹತ್ಯೆಗೆ ಸಂಚು ಸಿದ್ಧವಾಗುತ್ತದೆ.ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ದೊಡ್ಡ ಹೋರಾಟ ಮಾಡುತ್ತಿರುತ್ತಾರೆ ಸ್ವಾಮೀಜಿ.ಅವರಿಗೇ ಆಗಲೇ 70 ವರ್ಷ ವಯಸ್ಸಾಗಿರುತ್ತದೆ.

ಬದುಕಿನ ತುಂಬಾ ಬರೀ ಹೋರಾಟ, ಧರ್ಮ ರಕ್ಷಣೆ,ಸಮಾಜ ಸುಧಾರಣೆ ಹೀಗೆ ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡುತ್ತಿದ್ದ ಈ ಮಹಾನ್ ಸಂತನಿಗೆ 23 ಡಿಸೆಂಬರ್ 1926 ರಂದು ಭೇಟಿ ಮಾಡುವ ನೆಪದಲ್ಲಿ ತೆರಳಿ ಇಸ್ಲಾಂ ಭಯೋತ್ಪಾದಕ ಅಬ್ದುಲ್ ರಶೀದ್ 4 ಸುತ್ತು ಗುಂಡುಹಾರಿಸಿ ಸ್ವಾಮೀಜಿಯವರನ್ನು ಹತ್ಯೆಗೈಯ್ಯುತ್ತಾನೆ.

ಸ್ವಾಮೀಜಿಯವರ ಹತ್ಯೆಗೆ ಸಂತಾಪ ಸೂಚಿಸಲು 25-12-1926 ರಂದು ಅಸ್ಸಾಮಿನ ಗುವಾಹಟಿಯಲ್ಲಿ ಕಾಂಗ್ರೆಸ್ ಸಭೆ ಮಾಡುತ್ತಾರೆ.ಅದರ ಅಧ್ಯಕ್ಷತೆ ವಹಿಸಿಕೊಂಡಿದ್ದ ಗಾಂೀಜಿಯವರು ಅಹಿಂಸೆಯ ಭಾಷಣ ಶುರು ಮಾಡಿ ಆಗಿದ್ದು ಆಗಿ ಹೋಯಿತು ಹತ್ಯೆ ಮಾಡಿರುವ ಅಬ್ದುಲ್ ರಶೀದ್‍ಗೂ ಸಹ ಸ್ವಾಮೀಜಿಯವರ ಕೊಲೆಯ ಬಗ್ಗೆ ಪಶ್ಚಾತ್ತಾಪ ಇದೆ ಪಶ್ಚಾತ್ತಾಪಕ್ಕಿಂತ ದೊಡ್ಡ ಶಿಕ್ಷೆ ಮತ್ತೊಂದಿಲ್ಲ ಅವನು ನನ್ನ ಸಹೋದರ ಇದ್ದಂತೆ ಕ್ಷಮಿಸಿ ಬಿಡಿ ಎಂದು ಹೇಳಿ ಅಲ್ಲಿಂದ ಮತ್ತೊಂದು ಕಾರ್ಯಕ್ರಮಕ್ಕೆ ತೆರಳಿಬಿಡುತ್ತಾರೆ.

ಕೊನೆ ಸಾಲು…! ನೋಡಿ ಎಂತಹ ದುರಂತ ಗಾಂಯವರ ಹತ್ಯೆ ಮಾಡಿದ ಗೋಡ್ಸೆಯವರಿಗೆ ಗಲ್ಲು ಶಿಕ್ಷೆಯಾಯಿತು,ಸ್ವಾಮಿ ಶ್ರದ್ಧಾನಂದರ ಹತ್ಯೆ ಮಾಡಿದ ಇಸ್ಲಾಮಿನ ಭಯೋತ್ಪಾದಕ ಅಬ್ದುಲ್ ರಶೀದ್ ಕಡೆ ಪಕ್ಷ ಜೈಲು ಕಂಬಿಗಳನ್ನು ಸಹ ನೋಡಲಿಲ್ಲ. ಕ್ಷಮಿಸಿ ಬಿಡಿ ಸ್ವಾಮೀಜಿ.

Facebook Comments

Sri Raghav

Admin