ಕ್ರಿಕೆಟ್ ವಿದಾಯ ಹೇಳಿದ ಅಭಿಮನ್ಯು ಮಿಥುನ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ. 8- ಕರ್ನಾಟಕ ತಂಡವು ರಣಜಿ ಚಾಂಪಿಯನ್ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ವೇಗಿ ಅಭಿಮನ್ಯು ಮಿಥುನ್ ಅವರು ತಮ್ಮ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಕರ್ನಾಟಕದ ತಂಡದಲ್ಲಿ ಹಲವು ಯುವ ಪ್ರತಿಭೆಗಳಿದ್ದು ಅವರಿಗೆ ಅವಕಾಶ ಕಲ್ಪಿಸುವುದಕ್ಕಾಗಿ ನಾನು ನಿವೃತ್ತಿ ಪಡೆಯುತ್ತಿದ್ದೇನೆ, ನನ್ನ ಕ್ರಿಕೆಟ್ ಜೀವನದ ಯಶಸ್ವಿ ಪ್ರಯಾಣಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅಭಿಮನ್ಯು ಹೇಳಿದರು.

ಭಾರತದ ಪರ 4 ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್, 5 ಏಕದಿನ ಪಂದ್ಯಗಳಲ್ಲಿ 3 ವಿಕೆಟ್ ಕಬಳಿಸಿರುವ ಮಿಥುನ್, 61 ಪ್ರಥಮ ದರ್ಜೆ ಪಂದ್ಯಗಳಲ್ಲಿ 211 ವಿಕೆಟ್‍ಗಳನ್ನು ಕಬಳಿಸಿರುವುದಲ್ಲದೆ 1087 ರನ್‍ಗಳನ್ನು ಗಳಿಸಿದ್ದಾರೆ.

Facebook Comments