ಕ್ಯಾಪ್ಟನ್ ಅಭಿಮನ್ಯುಗೆ ಮರದ ಅಂಬಾರಿ ತಾಲೀಮು

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಅ. 18- ಮೈಸೂರು ದಸರಾ ವಿಶೇಷ ಆಕರ್ಷಣೆಯಾದ ಜಂಬೂ ಸವಾರಿ ದಿನ ಚಿನ್ನದ ಅಂಬಾರಿಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ನಡೆಯಲಿದೆ. ಈ ಹಿನ್ನೆಲಯಲ್ಲಿ ಇಂದು ಬೆಳಗ್ಗೆ ಕ್ಯಾಪ್ಟನ್ ಅಭಿಮನ್ಯುಗೆ ಅಂಬಾರಿ ತಾಲೀಮು ನಡೆಸಲಾಯಿತು.

ವಿಜಯದಶಮಿ ಜಂಬೂಸವಾರಿ ಮೆರವಣಿಗೆ ಅ.26ರಂದು ನಡೆಯಲಿದ್ದು, ಇದಕ್ಕಾಗಿ ಅರಮನೆ ಆವರಣದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಆನೆಗಳಿಗೆ ಅಂಬಾರಿ ತಾಲೀಮು ನಡೆಸಲಾಯಿತು.

ಅಭಿಮನ್ಯು ಆನೆಗೆ ಮರದ ಅಂಬಾರಿ ಹೊರುವ ತಾಲೀಮು ನಡೆಸಲಾಯಿತು. ಅಭಿಮನ್ಯು ಆನೆ 750 ಕೆ. ಜಿ. ತೂಕದ ಚಿನ್ನದ ಅಂಬಾರಿ ಹೊರಲಿರುವ ಹಿನ್ನೆಲೆಯಲ್ಲಿ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಯಿತು.  ಮರದ ಅಂಬಾರಿಯ ಜೊತೆಗೆ ಮರಳಿನ ಮೂಟೆಗಳನ್ನು ಹೊರೆಸಿ ಅರಮನೆ ಆವರಣದಲ್ಲಿ ತಾಲೀಮು ನಡೆಸಲಾಯಿತು ಎಂದು ಆನೆ ವೈದ್ಯ ಡಾ. ನಾಗರಾಜು ತಿಳಿಸಿದ್ದಾರೆ.

Facebook Comments