2019ರ ಗೂಗಲ್ ಸರ್ಚ್‍ನಲ್ಲಿ ಅಭಿನಂದನ್‍ಗೆ ನಂ. 1 ಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಡಿ.13- ಗೂಗಲ್ ಸರ್ಚ್‍ನಲ್ಲಿ ಹೆಚ್ಚಾಗಿ ಹುಡುಕಾಟಕ್ಕೆ ಒಳಗಾದ ಭಾರತದ ವ್ಯಕ್ತಿಗಳ ಪೈಕಿ ನಂಬರ್ 1 ಸ್ಥಾನದಲ್ಲಿ ಮಿಗ್ ಕಮಾಂಡರ್ ಅಭಿನಂದನ್ ವಧರ್ಮಾನ್ ಕಾಣಿಸಿಕೊಂಡಿದ್ದರೆ, ಗಾನ ಸಾಮ್ರಾಜ್ಞೆ ಲತಾಮಂಗೇಷ್ಕರ್ ಎರಡನೇ ಸ್ಥಾನ ಪಡೆದಿದ್ದಾರೆ.

2019ರ ಗೂಗಲ್ ಸರ್ಚ್‍ನಲ್ಲಿ ಜೂನ್‍ನಲ್ಲಿ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿರುವ ಸಿಕ್ಸರ್‍ಗಳ ಸರದಾರ ಯುವರಾಜ್‍ಸಿಂಗ್ ಅತಿ ಹೆಚ್ಚು ಹುಡುಕಾಟ ನಡೆಸಿದ ಕ್ರಿಕೆಟಿಗನಾಗಿದ್ದಾರೆ. ಒಟ್ಟಾರೆಯಾಗಿ 3ನೆ ಸ್ಥಾನದಲ್ಲಿದ್ದಾರೆ.

ಟೀಂ ಇಂಡಿಯಾದ ಯುವ ಕ್ರಿಕೆಟಿಗ, ವಿಕೆಟ್‍ಕೀಪರ್ 2ನೆ ಸ್ಥಾನದಲ್ಲಿದ್ದರೆ, ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಹಾಗೂ ಹಾಲಿ ನಾಯಕ ವಿರಾಟ್ ಕೊಹ್ಲಿ ಟಾಪ್ 10ರಲ್ಲಿ ಸ್ಥಾನ ಪಡೆಯದೆ ಇರುವುದು ಶೋಜಿಗವೆನಿಸಿದೆ. ವರ್ಷದಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಿರುವ ಸಾಲಿನಲ್ಲಿ ಆಂಗ್ಲರ ನಾಡಿನಲ್ಲಿ ನಡೆದ ಏಕದಿನ ವಿಶ್ವಕಪ್ ಸಮರವು ಅಗ್ರಸ್ಥಾನ ಪಡೆದಿದ್ದರೆ, ನರೇಂದ್ರ ಮೋದಿಯ ಅಲೆಯಿಂದ ಲೋಕಸಭಾ ಚುನಾವಣೆಯು ಎರಡನೇ ಸ್ಥಾನ ಪಡೆದಿದೆ, ನಂತರದ ಸ್ಥಾನಗಳಲ್ಲಿ ಚಂದ್ರಯಾನ 2 ಉಡಾವಣೆ, ಅವೆಂಜರ್ಸ್ ಎಂಡ್‍ಗೇಮ್ ಚಿತ್ರವಿದೆ.

2019ರಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಿದ ಕ್ರೀಡಾಕೂಟಗಳ ಸಾಲಿನಲ್ಲಿ ವಿಶ್ವಕಪ್ ನಂಬರ್ 1 ಆಗಿದ್ದರೆ, ಪ್ರೊ ಕಬ್ಬಡಿಯನ್ನು ಅತಿ ಹೆಚ್ಚು ಮಂದಿ ನೋಡಿದ್ದಾರಾದರೂ ಶ್ರೀಮಂತ ಕ್ರಿಕೆಟ್ ಸರಣಿಯೆಂದು ಗುರುತಿಸಿಕೊಂಡಿರುವ ಐಪಿಎಲ್‍ಗೆ ಟಾಪ್ 10ರಲ್ಲ ಸ್ಥಾನ ಸಿಕ್ಕಿಲ್ಲ.

2019ರಲ್ಲಿ ಅತಿ ಹುಡುಕಾಟ ನಡೆಸಿದ ದೇಶದ ವ್ಯಕ್ತಿಗಳ ಸಾಲಿನಲ್ಲಿ ಅಭಿನಂದನ್ ವರ್ಧಮಾನ್, ಲತಾ ಮಂಗೇಶ್ಕರ್, ಯುವರಾಜ್ ಸಿಂಗ್, ಆನಂದ್ ಕುಮಾರ್, ವಿಕಿ ಕೌಶಲ, ರಿಷಬ್ ಪಂತ್, ರಾನು ಮಂಡಲ್, ತಾರಾ ಸುತಾರಿಯ, ಸಿದ್ದಾರ್ಥ್ ಶುಕ್ಲಾ, ಕೊಯ್ನಾ ಮಿತ್ರಾ ಅವರು ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ.

Facebook Comments