ಪಾಕ್ ವಿಮಾನ ಉರುಳಿಸಿದ ವೀರ ಅಭಿನಂದನ್‌ಗೆ ನಾಳೆ ‘ವೀರಚಕ್ರ’ ಪ್ರದಾನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.14- ಪಾಕಿಸ್ತಾನ ವಾಯುಪಡೆಯ ಯುದ್ಧ ವಿಮಾನದೊಂದಿಗೆ ಸೆಣಸಾಡಿ ಅದನ್ನು ಹೊಡೆದುರುಳಿಸಿದ ನಂತರ ಕೆಲ ದಿನಗಳ ಕಾಲ ವೈರಿ ದೇಶದ ಯುದ್ಧಖೈದಿಯಾಗಿ ಬಿಡುಗಡೆ ಹೊಂದಿದ ಭಾರತೀಯ ವಾಯುಪಡೆಯ ಪರಾಕ್ರಮಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ನಾಳೆ ವೀರಚಕ್ರ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.

ರಾಜಧಾನಿ ನಾಳೆ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ 73ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ 36ವರ್ಷ ಅಭಿನಂದನ್‍ಗೆ “ವೀರಚಕ್ರ” ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲ್ಲಿದ್ದಾರೆ.

ನಲವತ್ತಕ್ಕೂ ಹೆಚ್ಚು ಯೋಧರನ್ನು ಬಲಿ ತೆಗೆದುಕೊಂಡ ಫುಲ್ವಾಮ ಭಯೋತ್ಪಾದಕರ ದಾಳಿಗೆ ಪ್ರತಿಕಾರವಾಗಿ ಭಾರತೀಯ ವಾಯುಪಡೆ ಯುದ್ಧವಿಮಾನಗಳು ಪಾಕ್ ಆಕ್ರಮಿತ ಬಾಲಾಕೋಟ್ ಮೇಲೆ ಮಿಂಚಿನ ದಾಳಿ ನಡೆಸಿ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿದ್ದವು.

ಇದಕ್ಕೆ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನ ಯುದ್ಧ ವಿಮಾನಗಳು ಭಾರತೀಯ ವಾಯು ಸರಹದ್ದು ಉಲ್ಲಂಘಿಸಿ ಕಾಶ್ಮೀರ ಕಣಿವೆ ಪ್ರವೇಶಿಸಿದ್ದವು ತಕ್ಷಣ ಎಚ್ಚೆತ್ತ ಭಾರತೀಯ ವಾಯುಪಡೆಯ ಪೈಟರ್‍ಜೆಟ್‍ಗಳು ಪಾಕ್ ವಿಮಾನವನ್ನು ಬೆನ್ನಟ್ಟಿದವು ಮಿಗ್-21 ವಿಮಾನದಲ್ಲಿದ್ದ ಅಭಿನಂದನ್ ವರ್ಧಮಾನ್ ಡಾಗ್ ಪೈಟ್‍ನಲ್ಲಿ(ವೈರಿ ವಿಮಾಣ ಬೆನ್ನಟ್ಟುವಿಕೆ) ಶತ್ರುವಿಮಾನವನ್ನು ಹೊಡೆದುರುಳಿಸಿದ್ದರು.

ನಂತರ ಪಾಕ್ ವಿಮಾನ ದಾಳಿಯಿಂದ ಅಭಿನಂದನ್ ಅವರಿದ್ದ ವಿಮಾನ ಪತನಗೊಂಡು ಪಾಕಿಸ್ತಾನದಲ್ಲಿ ಕೆಲಕಾಲ ಯುದ್ಧಖೈದಿಯಾಗಿದ್ದರು. ನಂತರ ಅವರು ಸುರಕ್ಷಿತವಾಗಿ ಬಿಡುಗಡೆಗೊಂಡಿದ್ದರು.

Facebook Comments