ದೀದಿ ಸೋದರಳಿಯ ಸಂಸದ ಅಭಿಷೇಕ್ ಮನೆ ಮೇಲೆ ಸಿಬಿಐ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಕೊಲ್ಕತಾ, ಫೆ.23 (ಪಿಟಿಐ)- ತ್ರಿನಮೂಲ್ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸಂಸದ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ದಕ್ಷಿಣ ಕೊಲ್ಕತಾದ ಮನೆಗೆ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಅಧಿಕಾರಿಗಳು ದಾಳಿ ಇಟ್ಟಿದ್ದಾರೆ. ಕಲ್ಲಿದ್ದಲು ದರೋಡೆ ಪ್ರಕರಣದಲ್ಲಿ ಸಂಸದ ಅಭಿಷೇಕ್ ಅವರ ಪತ್ನಿ ರುಜಿರಾ ಅವರನ್ನು ವಿಚಾರಣೆ ನಡೆಸಲು ಸಿಬಿಐ ತಂಡ ಧಾವಿಸಿದೆ ಎಂದು ತಿಳಿದುಬಂದಿದೆ.

ವಿಷಯ ತಿಳಿದ ತಕ್ಷಣ ಸಿಎಂ ಮಮತಾ ಬ್ಯಾನರ್ಜಿ ಅವರು ತನ್ನ ಸೋದರಳಿಯ ಅಭಿಷೇಕ್ ಮನೆಗೆ ಧಾವಿಸಿದ್ದಾರೆ. ಸಿಬಿಐ ತಂಡ ತನ್ನ ಸೋದರಳಿಯ ಪತ್ನಿ ರುಜಿರಾ ಅವರನ್ನು ವಿಚಾರಣೆ ಮಾಡುವ ಮುನ್ನ ಅವರು ತಲುಪಿದ್ದಾರೆ.

Facebook Comments