24 ವಾರಗಳ ಅವಧಿಯಲ್ಲೂ ಗರ್ಭಾಪಾತಕ್ಕೆ ಅನುಮತಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.14- ಅನಿವಾರ್ಯ ಸಂದರ್ಭಗಳಲ್ಲಿ 24 ವಾರಗಳ ಅವಧಿಯಲ್ಲೂ ಗರ್ಭಾಪಾತಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಗರ್ಭಾವಸ್ಥೆ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಅದಕ್ಕೆ ಇತ್ತೀಚೆಗೆ ನಡೆದ ಸಂಸತ್ ಅಧಿವೇಶನದಲ್ಲಿ ಅಂಗೀಕಾರ ದೊರೆತಿದೆ.

ಅದನ್ನು ಆಧರಿಸಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಸೂಚನೆ ಜಾರಿ ಮಾಡಿದೆ. ಏಳು ಆಯ್ದ ಸಂದರ್ಭಗಳಲ್ಲಿ ಆರು ತಿಂಗಳ ಅವಧಿಯಲ್ಲೂ ಗರ್ಭಾಪಾತ ಮಾಡಲು ಅವಕಾಶ ನೀಡಲಾಗಿದೆ.

ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಅಪ್ರಾಪ್ತರ ಗರ್ಭಾವಸ್ಥೆ, ವೈವಾಹಿಕ ಸಂಬಂಧದಲ್ಲಿನ ಏರು ಪೇರಾಗಿ ವಿಚ್ಛೇಧನ ಅಥವಾ ವಿಧವೆಯಾಗುವುದು. ಮಹಿಳೆಯ ದೈಹಿಕ ವಿಕಲಹೀನತೆ, ಮಾನಸಿಕ ಆರೋಗ್ಯ ಹದಗೆಡುವುದು ಸೇರಿದಂತೆ ಏಳು ತುರ್ತು ಸಂದರ್ಭಗಳಲ್ಲಿ ಗರ್ಭಾಪಾತ ಮಾಡಿಸಬಹುದಾಗಿದೆ.

ಈ ಮೊದಲು 20 ವಾರಗಳವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. 12 ವಾರಗಳ ಅವಧಿಯ ಗರ್ಭಾಪಾತವನ್ನು ಒಬ್ಬರೆ ವೈದ್ಯರು ನಿರ್ವಹಿಸಬಹುದು, 12 ರಿಂದ 20 ವಾರಗಳ ನಡುವಿನ ಗರ್ಭಾಪಾತವನ್ನು ಇಬ್ಬರು ವೈದ್ಯರು ನಿರ್ವಹಣೆ ಮಾಡಬೇಕಿದೆ.

24 ವಾರಗಳ ಗರ್ಭಾಪಾತವನ್ನು ರಾಜ್ಯ ಮಟ್ಟದ ವೈದ್ಯಕೀಯ ಮಂಡಳಿ ನಿರ್ಧರಿಸಬೇಕಿದೆ. ಮಂಡಳಿ ನಿರ್ಧಾರ ತೆಗೆದುಕೊಂಡ ಬಳಿಕ ಮಹಿಳೆಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವೈದ್ಯರು ಮುಂದಿನ ಕ್ರಮ ಜರುಗಿಸಬಹುದಾಗಿದೆ.

Facebook Comments