ಬಾಂಗ್ಲಾ ಮಸೀದಿ ಎಸಿ ಸ್ಫೋಟ ದುರುಂತದಲ್ಲಿ ಸತ್ತವರ ಸಂಖ್ಯೆ 20ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಢಾಕಾ,ಸೆ.6- ಬಾಂಗ್ಲಾದೇಶದ ರಾಜಧಾನಿ ಢಾಕಾ ನಗರದ ಹೊರ ವಲಯದ ಮಸೀದಿಯೊಂದರಲ್ಲಿ ನಿನ್ನೆ ರಾತ್ರಿ ಆರು ಹವಾನಿಯಂತ್ರಿತ (ಎಸಿ)ಗಳು ಸ್ಫೋಟಗೊಂಡು ಮಗು ಸೇರಿದಂತೆ 20 ಮಂದಿ ಮೃತಪಟ್ಟಿದ್ದಾರೆ.

ಈ ದುರ್ಘಟನೆಯಲ್ಲಿ 25ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಆತಂಕವಿದೆ.

ಢಾಕಾ ಹೊರವಲಯದ ನಾರಾಯಣಘಂಜ್ ಬಂಧರು ಪಟ್ಟಣದ ಸಮೀಪ ಇರುವ ಮಸೀದಿಯಲ್ಲಿ ಶುಕ್ರವಾರ ರಾತ್ರಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಗಾಗಿ ಇಲ್ಲಿ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಆರು ಎಸಿಗಳಲ್ಲಿ ಸರಣಿ ಸ್ಫೋಟ ಸಂಭವಿಸಿ 20 ಮಂದಿ ಮೃತಪಟ್ಟಿದ್ದಾರೆ.

ತೀವ್ರ ಗಾಯಗೊಂಡ 25 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಕೆಲವರಿಗೆ ಶೇ.90ರಷ್ಟು ಸುಟ್ಟ ಗಾಯಗಳಾಗಿವೆ. ಹವಾನಿಯಂತ್ರಿತ ಸಾಧನದ ಪೈಪ್‍ನಲ್ಲಿ ಸಂಗ್ರಹಗೊಂಡ ಅನಿಲಕ್ಕೆ ಬೆಂಕಿ ತಗುಲಿ ಈ ಸ್ಫೋಟ ಸಂಭವಿಸಿದೆ.

Facebook Comments