ಎಸಿಬಿ ಖೆಡ್ಡಾಗೆ ಬಿದ್ದ ಪಿಎಸ್‍ಐ, ಹೆಡ್‍ಕಾನ್‍ಸ್ಟೇಬಲ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.12- ದೂರು ದಾಖಲಿಸಬಾರದು ಎಂದು ಮಹಿಳೆಯಿಂದ ಹಣದ ಬೇಡಿಕೆ ಇಟ್ಟಿದ್ದ ಪೊಲೀಸ್ ಸಿಬ್ಬಂದಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ದಾಖಲಿಸಬಾರದು ಎಂದು ಹೇಳಿದ ಮಹಿಳೆಯೊಬ್ಬಳಿಂದ ಪಿಎಸ್‍ಐ ಸೌಮ್ಯ ಮತ್ತು ಹೆಡ್‍ಕಾನ್‍ಸ್ಟೇಬಲ್‍ ಜೆ.ಪಿ.ರೆಡ್ಡಿ ಅವರು 1 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಬಂದ ನಿಖರ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಅಧಿಕಾರಿಗಳನ್ನು ಬಲೆಗೆ ಬೀಳಿಸಿ ತನಿಖೆ ಮುಂದುವರೆಸಿದ್ದಾರೆ.  ಮೊಬೈಲ್ ಪ್ರಕರಣವೊಂದರಲ್ಲಿ ಪತಿಯ ವಿರುದ್ಧ ದೂರು ದಾಖಲಿಸಲು ಅವರ ಪತ್ನಿ ಕೇಳಿಕೊಂಡಾಗ 1 ಲಕ್ಷ ಲಂಚದ ಹಣ ಕೇಳಿದ್ದರು.

Facebook Comments