ACB ಕಚೇರಿಯ ಡಿವೈಎಸ್‍ಪಿಗೆ ಕೊರೊನಾ ಸೋಂಕು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.9- ನಗರದ ಭ್ರಷ್ಟಾಚಾರ ನಿಗ್ರಹ ದಳ ಕಚೇರಿಯ ಡಿವೈಎಸ್‍ಪಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೊನಾ ವಾರಿಯರ್ಸ್‍ಗಳಾಗಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗಳನ್ನು ಬಿಟ್ಟೂ ಬಿಡದೆ ಕೊರೊನಾ ಕಾಡುತ್ತಿದೆ.

ಸುಮಾರು 375 ಮಂದಿಗೆ ಸೋಂಕು ತಗುಲಿದೆ. ಈಗ ಎಸಿಬಿ ಕಚೇರಿಯ ಸಿಬ್ಬಂದಿಗಳನ್ನು ಸೋಂಕು ಬೆನ್ನತ್ತಿರುವುದು ಆತಂಕ ಸೃಷ್ಟಿಸಿದೆ. ಕಳೆದ 15 ದಿನಗಳ ಹಿಂದೆ ಎಸಿಬಿ ಕಚೇರಿಯ ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿತ್ತು.

ಆಗ ಸ್ಯಾನಿಟೈಜ್ ಮಾಡಿ ಸೀಲ್‍ಡೌನ್ ಮಾಡಲಾಗಿತ್ತು. ಈಗ ಮತ್ತೆ ಡಿವೈಎಸ್‍ಪಿಯವರಿಗೆ ಸೋಂಕು ತಗುಲಿದೆ. ನಿನ್ನೆಯಷ್ಟೇ ಪ್ರಯೋಗಾಲಯದ ವರದಿ ಬಂದಿದೆ. ಕೂಡಲೇ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿವೈಎಸ್‍ಪಿ ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ಇತರರನ್ನೂ ಪತ್ತೆಹಚ್ಚಿ ಕ್ವಾರಂಟೈನ್‍ನಲ್ಲಿಡುವ ಪ್ರಯತ್ನ ನಡೆಯುತ್ತಿದೆ. ಸದ್ಯಕ್ಕೆ ಎಸಿಬಿ ಕಚೇರಿಯನ್ನು ಸೀಲ್‍ಡೌನ್ ಮಾಡಿಲ್ಲ. ಡಿವೈಎಸ್‍ಪಿ ಅವರ ಕಚೇರಿಯನ್ನು ಮಾತ್ರ ಸ್ಯಾನಿಟೈಜ್‍ಗೆ ಒಳಪಡಿಸಲಾಗಿದೆ.

Facebook Comments