ನಿನ್ನೆ ನಡೆದ ಎಸಿಬಿ ದಾಳಿ ವೇಳೆ ಮೂವರು ಅಧಿಕಾರಿಗಳ ಬಳಿ ಸಿಕ್ಕ ಅಸ್ತಿ ಎಷ್ಟು ಗೊತ್ತೇ.?

ಈ ಸುದ್ದಿಯನ್ನು ಶೇರ್ ಮಾಡಿ

ACB

ಬೆಂಗಳೂರು, ಜು.18- ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಿನ್ನೆ ಮೂವರು ಹಿರಿಯ ಅಧಿಕಾರಿಗಳ ಮೇಲೆ ನಡೆಸಿದ ದಾಳಿ ವೇಳೆ ಕೋಟ್ಯಂತರ ಮೊತ್ತದ ಚರ-ಚಿರ ಆಸ್ತಿಗಳನ್ನು ಪತ್ತೆಹಚ್ಚಲಾಗಿದೆ. ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ವಿಜಯ್‍ಕುಮಾರ್ ಅವರ ಬಳಿ ಎರಡು ಮನೆ, ಮಂಗಳೂರು ಹಾಗೂ ಬೆಂಗಳೂರು ನಗರದಲ್ಲಿ 5 ಗುಂಟೆ ವಿಸ್ತೀರ್ಣದ ಎರಡು ನಿವೇಶನ ಸೇರಿದಂತೆ ಒಟ್ಟು 4 ನಿವೇಶನಗಳು ಪತ್ತೆಯಾಗಿವೆ.

ಇದಲ್ಲದೆ, 276 ಗ್ರಾಂ ಚಿನ್ನ, 3700 ಗ್ರಾಂ ಬೆಳ್ಳಿ, 21 ಕಾರುಗಳು, 2 ದ್ವಿಚಕ್ರ ವಾಹನ, 10.59 ಲಕ್ಷ ನಗದು ಮತ್ತು 20 ಲಕ್ಷ ಗೃಹೋಪಯೋಗಿ ವಸ್ತುಗಳು ಸಿಕ್ಕಿವೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.ಇದೇ ವೇಳೆ ಉಪನಿರ್ದೇಶಕ ಗಂಗಯ್ಯ ಅವರ ಬಳಿ 1 ಮನೆ, 4 ನಿವೇಶನಗಳು, 4.36 ಎಕರೆ ಕೃಷಿ ಜಮೀನು, 0.5 ಎಕರೆ ಕೈಗಾರಿಕಾಭಿವೃದ್ಧಿ ಜಮೀನು, 220 ಗ್ರಾಂ ಚಿನ್ನ, 270 ಗ್ರಾಂ ಬೆಳ್ಳಿ, 1 ಸ್ವಿಫ್ಟ್ ಕಾರು, 1 ಕರೀಷ್ಮಾ ದ್ವಿಚಕ್ರ ವಾಹನ, 64,500ರೂ. ನಗದು ಸೇರಿದಂತೆ 15 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಇನ್ನು ಚಿಕ್ಕಮಗಳೂರಿನ ಎಸಿಎಫ್ ಕೆ.ಎಸ್.ರಂಗಸ್ವಾಮಿ ಅವರ ಬಳಿ ಚಿಕ್ಕಮಗಳೂರಿನಲ್ಲಿ ಒಂದು ವಾಸದ ಮನೆ, ಕೊಪ್ಪ ತಾಲೂಕಿನಲ್ಲಿ 6 ಎಕರೆ ಕೃಷಿ ಜಮೀನು, 585 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ, 1 ಮಾರುತಿ ಕಾರು, 1 ಹೋಂಡಾ ಹೈ-20 ಕಾರು ಹಾಗೂ 2.53 ಲಕ್ಷ ನಗದು ಹಾಗೂ 3 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಕಂಡುಬಂದಿವೆ. ಈ ಮೂರೂ ಪ್ರಕರಣಗಳ ತನಿಖೆ ಇನ್ನೂ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕಿದೆ ಎಂದು ಎಸಿಬಿ ಪ್ರಕಟಣೆ ತಿಳಿಸಿದೆ.

Facebook Comments

Sri Raghav

Admin