ಲಂಚ ಪಡೆದ ವಾಣಿಜ್ಯ ತೆರಿಗೆ ನೌಕರ ಎಸಿಬಿ ಬಲೆಗೆ

ಈ ಸುದ್ದಿಯನ್ನು ಶೇರ್ ಮಾಡಿ

ಶಿವಮೊಗ್ಗ. ಜ.19: ವ್ಯಾಪಾರಸ್ಥರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವಾಣಿಜ್ಯ ತೆರಿಗೆ ನೌಕರನೊಬ್ಬ ಎಸಿಬಿ ಬಲೆಗೆ ಸಿಕ್ಕಿಬಿದ್ದ ಘಟನೆ ಇಂದು ನಡೆದಿದೆ. ಭದ್ರಾವತಿ ವಾಣಿಜ್ಯ ತೆರಿಗೆ ಅಧಿಕಾರಿ ಕಚೇರಿಯ ಕಂಪ್ಯೂಟರ್ ಆಪರೇಟರ್ ವೇಣು ಎಸಿಬಿ ಬಲೆಗೆ ಸಿಲುಕಿದ ನೌಕರ.

ಈತ ಷಾಮಿಯಾನ ವ್ಯಾಪಾರಿ ಜಾಕೀರ್ ಎಂಬುವರಿಂದ ಜಿಎಸ್ ಟಿ ನೋಂದಣಿಗೆ 2,500 ರೂ. ಲಂಚ ಪಡೆದಾಗ ಎಸಿಬಿ ಡಿಎಸ್ ಪಿ ಲೋಕೇಶ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸದರಿ ನೌಕರನನ್ನು ಲಂಚದ ಹಣದೊಂದಿಗೆ ಬಂಧಿಸಿದರು.

Facebook Comments

Sri Raghav

Admin