ನಿವೇಶನ ಹಕ್ಕು ಬದಲಾವಣೆಗೆ ಲಂಚ : ಎಸಿಬಿ ಬಲೆಗೆ ಬಿದ್ದ ಪಿಡಿಒ

ಈ ಸುದ್ದಿಯನ್ನು ಶೇರ್ ಮಾಡಿ

ನೆಲಮಂಗಲ, ಅ.23- ನಿವೇಶನದ ಹಕ್ಕು ಬದಲಾವಣೆ ಮಾಡಿಕೊಡಲು 80 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, 40ಸಾವಿರ ಮುಂಗಡ ಹಣ ಪಡೆಯುತ್ತಿದ್ದ ಪಿಡಿಒ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ತಾಲ್ಲೂಕಿನ ಕುಲುವನಹಳ್ಳಿ ಪಿಡಿಒ ಮಂಜುನಾಥ್ ಬಂಧಿತ ಅಧಿಕಾರಿ.

ಲಕ್ಷ್ಮೀದೇವಿ ಅವರ ಪತಿ ಇತ್ತೀಚೆಗೆ ನಿಧನರಾಗಿದ್ದು, ಅವರ ಹೆಸರಿನಲ್ಲಿದ್ದ ನಿವೇಶನವನ್ನು ಪವತಿ ಖಾತೆ ಮಾಡಿಕೊಡಲು ಮನವಿ ಸಲ್ಲಿಸಲಾಗಿತ್ತು. ಇದಕ್ಕಾಗಿ ಕುಲವನಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ 80 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಲಕ್ಷ್ಮೀದೇವಿ ಸಹೋದರ ಬಿ.ಎಚ್.ರಾಜು ಅವರು ಎಸಿಬಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿ ಕಾರ್ಯಾಚರಣೆ ಆರಂಭಿಸಿದ ಎಸಿಬಿ ಡಿವೈಎಸ್‍ಪಿ ಗೋಪಾಲ್ ಜೋಗಿನ್ ಅವರ ತಂಡ ಮಂಜುನಾಥ್‍ರನ್ನು ಬಂಧಿಸಿದೆ. ಮಂಜುನಾಥ್ ಅವರು ಗುರುಗುಂಟೆ ಪಾಳ್ಯದ ಬಸ್ ನಿಲ್ದಾಣಕ್ಕೆ ಅರ್ಜಿದಾರರನ್ನು ಬರಲು ಹೇಳಿ ಅಲ್ಲಿ ಹಣ ಪಡೆದುಕೊಳ್ಳುವಾಗ ದಾಳಿ ಮಾಡಿ ಬಂಧಿಸಲಾಗಿದೆ.

Facebook Comments