ಸುಪ್ರೀಂಕೋರ್ಟ್‍ನ ಆದೇಶ ತೃಪ್ತಿ ನೀಡಿಲ್ಲ ಎಂದ ಸುನ್ನಿ ವಕ್ಫ್ ಮಂಡಳಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.9-ಅಯೋಧ್ಯೆ ರಾಮಮಂದಿರ-ಬಾಬರಿ ಮಸೀದಿ ನಿವೇಶನ ವಿವಾದದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ನಾವು ಗೌರವಿಸುತ್ತೇವೆ. ಆದರೆ ಸುಪ್ರೀಂಕೋರ್ಟ್‍ನ ಆದೇಶ ತೃಪ್ತಿ ನೀಡಿಲ್ಲ ಎಂದು ಈ ವಿವಾದದ ಪ್ರಮುಖ ಪಕ್ಷಗಾರರಲ್ಲಿ ಒಬ್ಬರಾದ ಸುನ್ನಿ ವಕ್ಫ್ ಮಂಡಳಿ ಪ್ರತಿಕ್ರಿಯಿಸಿದೆ.

ತೀರ್ಪಿನ ನಂತರ ಸುಪ್ರೀಂಕೋರ್ಟ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಂಡಳಿ ಪರ ವಕ್ತಾರ ಜಿಲಾನಿ, ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಪ್ರತ್ಯೇಕ ಭೂಮಿ ನೀಡಿರುವ ತೀರ್ಪು ಸರಿಯಲ್ಲ. ನಮಗೆ ಇದು ಅಸಮಾಧಾನವಾಗಿದೆ.

ಇದನ್ನು ನ್ಯಾಯ ನಿರ್ಣಯ ಎಂದು ಪರಿಗಣಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಸುಪ್ರೀಂಕೋರ್ಟ್ ತೀರ್ಪಿನ ಪರಿಪೂರ್ಣ ಅಂಶವನ್ನು ಸಮಗ್ರವಾಗಿ ಪರಾಮರ್ಶಿಸಿ ನಂತರ ಈ ಬಗ್ಗೆ ಮಂಡಳಿಯು ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.

ಈ ತೀರ್ಪಿನ ಹಿನ್ನೆಲೆಯಲ್ಲಿ ಯಾರೂ ಉದ್ವೇಗಕ್ಕೆ ಒಳಗಾಗುತ್ತಿಲ್ಲ. ಕೋಮು ಸಾಮರಸ್ಯ ಮತ್ತು ಶಾಂತಿ ಕಾಪಾಡುವ ಅಗತ್ಯವಿದೆ ಎಂದು ಅವರು ಮಂಡಳಿ ಪರವಾಗಿ ಮನವಿ ಮಾಡಿದರು.

Facebook Comments

Sri Raghav

Admin