ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಕಾರು, ಮೂವರು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಅ.25- ಮೂಡಿಗೆರೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಕಾರು ಡಿಕ್ಕಿ ಹೊಡೆದು ಹಳ್ಳಕ್ಕೆ ಬಿದ್ದು ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಮೂಡಿಗೆರೆ ತಾಲೂಕಿನ ಬಡವನದಿಣ್ಣೆ ಬಳಿ ಘಟನೆ ನಡೆದಿದೆ. ಹಳ್ಳದಲ್ಲಿ ಸಿಲುಕಿಕೊಂಡಿದ್ದ ಕಾರಿನಿಂದ ಸ್ಥಳೀಯರು ಹೊರ ತೆಗೆದರು.

ವೇಣೂರು-ಉಜಿರೆ-ಕೊಟ್ಟಿಗೆಹಾರ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿದ್ದ ಇನೋವ ಕ್ರಿಸ್ಟಾ ವಾಹನ ಸಂಖ್ಯೆ KA 05 AA 4252 ಅಪಘಾತಕ್ಕೀಡಾಗಿದ್ದು, ಮೃತರನ್ನು ಯಶೋಧ ನರಸಿಂಹರಾವ್ (82) ಅನಿರುದ್ಧ (24) ಪ್ರಕಾಶ್ (61) ಎಂದು ಗುರುತಿಸಲಾಗಿದೆ. ಇವರೆಲ್ಲಾ ಬೆಂಗಳೂರಿನ ಹೆಬ್ಬಾಳ ಮೂಲದವರು.

ಅನುರೂಪ, ಹಾಗೂ ನರಸಿಂಹ ರಾವ್ ಎಂಬ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಯಾವುದೇ ಪ್ರಾಣಾಪಾಯವಿರುವುದಿಲ್ಲ ಇವರೆಲ್ಲಾ ಮಂಗಳೂರಿನ ವೇಣೂರಿನಲ್ಲಿ ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬೆಂಗಳೂರಿಗೆ ಹೋಗುವಾಗ ಅಪಘಾತ ಸಂಭವಿಸಿದೆ.

ಸ್ಥಳಕ್ಕೆ ಬಣಕಲ್ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿ ಆಗಮಿಸಿದ್ದು ಮೃತರ ದೇಹವನ್ನು ಸರಕಾರಿ ಆಸ್ಪತ್ರೆ ಮೂಡಿಗೆರೆಗೆ ರವಾನಿಸುತ್ತಾರೆ. ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments