ಮಿಲಿಟರಿ ಲಾರಿ – ಕಾರಿನ ನಡುವೆ ಅಪಘಾತ

ಈ ಸುದ್ದಿಯನ್ನು ಶೇರ್ ಮಾಡಿ

ನಂಜನಗೂಡು, ಫೆ.25- ವೇಗವಾಗಿ ಚಲಿಸುತ್ತಿದ್ದ ಕಾರೊಂದು ಮಿಲಿಟರಿ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿರುವ ಘಟನೆ ತಾಲೂಕಿನ ದೊಡ್ಡಕವಲಂದೆ ಬಳಿ ನಡೆದಿದೆ. ಘಟನೆಯಲ್ಲಿ ಕಾರಿನ ಚಾಲಕ ಗಣಪತಿ ಎಂಬುವವರಿಗೆ ಗಂಭಿರ ಗಾಯವಾಗಿದೆ. ಇವರಿಬ್ಬರೂ ಷಣ್ಮುಗ ಮತ್ತು ಪಾಂಡ್ಯ ರವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ತಮಿಳುನಾಡು ರಾಜ್ಯದ ಮಧುರೈ ಜಿಲ್ಲೆಯ ಸುಬ್ಯಹ್ಮಣ್ಯ ನಗರದ ನಿವಾಸಿಗಳು ಎಂದು ತಿಳಿದು ಬಂದಿದೆ.

ತಮಿಳುನಾಡಿನಿಂದ ಚಾಮರಾಜನಗರ ಮೂಲಕ ಮೈಸೂರಿಗೆ ಬೆಳಿಗ್ಗೆ 8.30 ರಲ್ಲಿ ತೆರಳುತ್ತಿದ್ದ ವೇಳೆ ತಮಿಳುನಾಡು ನೊಂದಣಿಯ ಕಾರೊಂದು ನಂಜನಗೂಡು ಕಡೆಯಿಂದ ಬರುತ್ತಿದ್ದ ಮಿಲಿಟರಿ ತರಬೇತಿ ಲಾರಿಗೆ ದೊಡ್ಡಕವಲಂದೆ ಬಳಿ ಇರುವ ಸ್ಮಶಾನದ ಬಳಿ ವೇಗವಾಗಿ ಬಂದು ಗುದ್ದಿದೆ. ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಚಾಲಕನಿಗೆ ಗಂಭೀರ ಗಾಯ ಉಂಟಾಗಿದ್ದು ಕಾರಿನಲ್ಲಿದ್ದ ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದಾರೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಸೇನಾ ಪಡೆ ಯೋಧರು ಮತ್ತೊಂದು ಸೇನಾ ವಾಹನದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ ಆರ್ ಆಸ್ಪತ್ರೆಗೆ ಗಾಯಾಳುಗಳನ್ನು ರವಾನಿಸಿದ್ದಾರೆ.
ಸೇನೆಯ ತರಬೇತಿ ವಾಹನಗಳು ಎಡಭಾಗದಲ್ಲಿ ನಿಧಾನವಾಗಿ ಚಲಿಸುತ್ತಿದ್ದರೂ ಕೂಡ, ಕಾರು ಚಾಲಕನ ಅತಿ ವೇಗ ಅಜಾಗರೂಕತೆಯ ಚಾಲನೆಯಿಂಧ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಎಡಭಾಗದಲ್ಲಿ ಚಲಿಸಬೇಕಿದ್ದ ಕಾರು ಪೂರ್ಣ ಪ್ರಮಾಣದಲ್ಲಿ ಬಲಭಾಗಕ್ಕೆ ಚಲಿಸಿದ್ದೆ ಅಪಘಾತಕ್ಕೆ ಪ್ರಮುಖ ಕಾರಣವಾಗಿದ್ದು, ಈ ಸಂಬಂಧ ದೊಡ್ಡಕವಲಂದೆ ಪೋಲಿಸ್ ಠಾಣೆ ಎಎಸ್‍ಐ ಚಂದ್ರಶೇಖರ್ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Facebook Comments