ಕ್ರೂಸರ್- ಕಾರು ಅಪಘಾತ ನಾಲ್ವರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ನ.25- ಕ್ರೂಜರ್ ಮತ್ತು ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಗದಗ-ಹುಬ್ಬಳ್ಳಿ ರಸ್ತೆಯ ಕೊಂಡಿಕೊಪ್ಪ ಕ್ರಾಸ್ ಬಳಿ ಇಂದು ಮುಂಜಾನೆ ಸಂಭವಿಸಿದೆ. ರಾಯಚೂರು ಜಿಲ್ಲೆಯ ಮಾನ್ವಿಯ ವಿಠ್ಠಲ ನಗರದ ನಿವಾಸಿಗಳಾದ ಸಣ್ಣ ಗಂಗಣ್ಣ, ನಾಗಮ್ಮ, ಹನುಮಂತು ಮತ್ತು ಈರಣ್ಣ ಮೃತ ದುರ್ದೈವಿಗಳು.

ಮಾನ್ವಿಯಿಂದ ಕಾರವಾರದ ಹಲಗಾ ಗ್ರಾಮಕ್ಕೆ ಪಾಶ್ರ್ವವಾಯು ಚಿಕಿತ್ಸೆಗೆಂದು ಹೊರಟಿದ್ದರು. ಅಣ್ಣಿಗೇರಿ ಪಟ್ಟಣದ ಬಳಿಯ ಕೊಂಡಿಕೊಪ್ಪ ಕ್ರಾಸ್ ಬಳಿ ಕ್ರೂಜರ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಘಟನೆಗೆ ಕ್ರೂಜರ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.

ಅಪಘಾತದಲ್ಲಿ ಸಣ್ಣೀರಣ್ಣ ಮತ್ತು ಲಕ್ಷ್ಮೀ ಗಾಯಗೊಂಡಿದ್ದಾರೆ. ಕ್ರೂಜರ್‍ನ ಚಾಲಕ ಮಲ್ಲಪ್ಪ ಗಿಡ್ಡನ್ನವರ್ ತೀವ್ರವಾಗಿ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಅಣ್ಣಿಗೇರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments