ಜವರಾಯನ ಅಟ್ಟಹಾಸ : ನಾಲ್ವರು ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಮುಧೋಳ,ಜ.3- ಕಾರು ಮತ್ತು ಸಾರಿಗೆ ಸಂಸ್ಥೆ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ ಶಿರೋಳ ಕ್ರಾಸ್ ಬಳಿ ಇಂದು ಬೆಳ್ಳಂಬೆಳಗ್ಗೆ ನಡೆದಿದೆ. ಸಿದ್ದರಾಯ ತೇಲಿ (36), ಬಾಲಪ್ಪ ಸಂಡಗಿ (34), ಹನಮಂತ ಗನಗಾರ (21), ರಿಯಾಜ ಜಾಲಗೇರ (25) ಮೃತ ಪಟ್ಟವರು ಎಂದು ತಿಳಿದುಬಂದಿದೆ.

ಇವರೆಲ್ಲರೂ ಜಮಖಂಡಿ ತಾಲೂಕಿನ ಗೋಠೆ ಗ್ರಾಮದವರೆಂದು ಹೇಳಲಾಗಿದೆ. ಮೃತರು ನ್ಯಾಯಲಯದ ವ್ಯಾಜ್ಯದ ನಿಮಿತ್ತ ಗೋಠಯಿಂದ ಧಾರವಾಡದ ಹೈಕೋರ್ಟ್ ಗೆ ತೆರಳುತ್ತಿದ್ದರು. ಬೆಳಗಾವಿಯಿಂದ ಕಲಬುರಗಿ ಮಾರ್ಗವಾಗಿ ತೆರಳುತಿದ್ದ ಬಸ್, ಕಬ್ಬಿನ ಟ್ರ್ಯಾಕ್ಟರ್ ಓವರ್ ಟೆಕ್ ಮಾಡುವ ಭರದಲ್ಲಿ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮುಧೋಳ ಠಾಣೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments