ಪತ್ನಿ ಪೋಟೋಗೆ ಹೂ ತರಲು ಹೋಗಿದ್ದ ಪತಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಚಾಮರಾಜನಗರ, ಅ.19- ಅಗಲಿದ ಪತ್ನಿ ಪೋಟೋಗೆ ಹೂ ತರಲು ತೆರಳಿದ್ದ ಪತಿ ಮೇಲೆ ಟೆಂಪೋ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಯಳಂದೂರು ಪಟ್ಟಣದಲ್ಲಿ ನಡೆದಿದೆ. ಯರಗಂಬಳ್ಳಿ ಗ್ರಾಮದ ನಿವಾಸಿ ಮರಿಸ್ವಾಮಿ(40) ಮೃತಪಟ್ಟ ದುರ್ದೈವಿ.

ಇವರ ಪತ್ನಿ ಇತ್ತೀಚೆಗೆ ಕೊರೊನಾ ಸೊಂಕಿಗೆ ಬಲಿಯಾಗಿದ್ದು, ಇಂದು ಬೆಳಗ್ಗೆ ಪತ್ನಿಯ ಪೋಟೋಗೆ ಹೂ ಹಾಕಲೆಂದು ಹೂ ತರಲು ಅಂಗಡಿಗೆ ತೆರಳುತ್ತಿದ್ದಾಗ ಜವರಾಯನಂತೆ ಬಂದ ಟೆಂಪೋ ಮರಿಸ್ವಾಮಿ ಅವರ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಟೆಂಪೋ ಚಾಲಕ ಅಪಘಾತವಾಗುತ್ತಿದ್ದಂತೆ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಅತ್ಯಂತ ಕಿರಿದಾಗಿದ್ದು, ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಸಬಂಧ ಪಟ್ಟ ಅಕಾರಿಗಲು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Facebook Comments