ಆಕಸ್ಮಿಕ ಬೆಂಕಿಗೆ ನಾಲ್ಕು ಗುಡಿಸಲು ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನಪಟ್ಟಣ, ಫೆ.13- ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಐದು ಗುಡಿಸಲುಗಳು ಭಸ್ಮವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿಯ ಕೆನ್ನಾಲಿಗೆಗೆ ತಿಮ್ಮಮ್ಮ, ವೆಂಕಟಲಕ್ಷ್ಮಮ್ಮ, ವೆಂಕಟೇಶ್, ಸಾಕಮ್ಮ ಎಂಬುವರಿಗೆ ಸೇರಿದ ಮನೆಗಳಾಗಿದ್ದು, ಮನೆ ಮಂದಿಯೆಲ್ಲಾ ಊಟ ಮಾಡಿ ಮಲಗುವ ಸಮಯದಲ್ಲಿ, ಇದ್ದಕ್ಕಿದ್ದ ಹಾಗೇ ಒಂದು ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು, ಕ್ಷಣಾರ್ಧದದಲ್ಲಿ ಬೆಂಕಿ ನಾಲ್ಕು ಗುಡಿಸಲುಗಳಿಗೂ ಬೆಂಕಿ ಆವರಿಸಿಕೊಂಡು, ನೋಡುನೋಡುತ್ತದ್ದಂತೆ ಗುಡಿಸಲುಗಳ ಧಗಧಸಿವೆ.

ಬೇಸಿಗೆಯ ಸಂದರ್ಭವಾಗಿರುವುದರಿಂದ, ಅಲ್ಲದೇ ನಾಲ್ಕು ಗುಡಿಸಲುಗಳು ಹೊಂದಿಕೊಂಡಂತೆ ಇದ್ದುದ್ದರಿಂದ, ಬೆಂಕಿ ಬೇಗನೇ ಗುಡಿಸಲುಗಳಿಗೆ ಅವರಿಸಿಕೊಂಡು ಉರಿಯಲಾರಂಭಿಸಿದಾಗ, ಸ್ಥಳಿಯರು ಬೆಂಕಿಯನ್ನು ನಂದಿಸಲಾರದ ಸ್ಥಿತಿಯಲ್ಲಿದ್ದರು. ಸುದ್ದಿ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಾದ್ಯವಾದಷ್ಟು ಬೆಂಕಿಯನ್ನು ನಂದಿಸಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ, ಸ್ಥಳಕ್ಕೆ ಬಂದ ಗ್ರಾಮಾಂತರ ವೃತ್ತ ನಿರೀಕ್ಷಕ ಬಿ.ಶಿವಕುಮಾರ್ ಹಾಗೂ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯ ಪಿ.ಎಸ್.ಐ.ಸದಾನಂದ, ಗುಡಿಸಲುಗಳನ್ನು ಕಳೆದುಕೊಂಡು ಬೀದಿಗೆ ಬಿದ್ದ ನಿರಾಶ್ರಿತರಿಗೆ ಸೂರು ಕಲ್ಪಿಸಲು ಕ್ರಮ ಕೈಗೊಂಡಿದ್ದಾರೆ. ನಾಲ್ಕು ಗುಡಿಸಲುಗಳ 10ರಿಂದ 15 ಮಂದಿಯ ಜೀವನ ಬರ್ಬರವಾಗಿದ್ದು, ಬೆಂಕಿಯಿಂದ ತಮ್ಮ ಜೋಪಡಿಗಳನ್ನು ಕಳೆದುಕೊಂಡು, ದಿಕ್ಕುಕಾಣದೆ ನಿರಾಶ್ರಿತರಾಗಿರುವ ಕುಟುಂಬಗಳ ಕಣ್ಣುಗಳು, ದಾನಿಗಳ ಸಹಾಯಾಸ್ತವನ್ನು ಎದುರು ನೋಡುತ್ತಿದ್ದು, ಉಳ್ಳವರು, ದಾನಿಗಳು, ನಿರಾಶ್ರಿತರ ನೋಗೆ ಸ್ಪಂದನೆಯಾಗುವರೇ ಕಾದು ನೋಡಬೇಕು.

Facebook Comments