ಆಕಸ್ಮಿಕ ಬೆಂಕಿ ಅಡುಗೆ ಸಿಲೆಂಡರ್’ಗೆ ತಗುಲಿ 5 ಗುಡಿಸಲು ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

Fire-In-Wood-homes
ಗೌರಿಬಿದನೂರು, ಸೆ.9- ಆಕಸ್ಮಿಕವಾಗಿ ಹೊತ್ತುಕೊಂಡ ಬೆಂಕಿ ಎಲ್‍ಪಿಜಿ ಅಡುಗೆ ಸಿಲೆಂಡರ್‍ಗೆ ತಗುಲಿದ ಪರಿಣಾಮ ಗ್ಯಾಸ್ ಲೀಕ್ ಆಗಿ ಅಕ್ಕ ಪಕ್ಕದ ಮನೆಗಳಿಗೆ ಹರಡಿ ಒಟ್ಟು 5 ಮನೆಗಳು ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ನಗರಗೆರೆ ಹೋಬಳಿ ಮಣಿವಾಲ ಗ್ರಾಮದಲ್ಲಿ ನಡೆದಿದೆ. ಮಣಿವಾಲ ಗ್ರಾಮದ ಆನಂದ ಎಂಬುವವರ ಮನೆಯಲ್ಲಿ ಮೊದಲಿಗೆ ಬೆಂಕಿ ಹೊತ್ತಿಕೊಂಡಿದ್ದು, ನಂತರ ಸರಣಿ ಸಾಲಿನಲ್ಲಿ ನಿರ್ಮಿಸಿಕೊಂಡಿದ್ದ 5 ಗುಡಿಸಲು ಮನೆಗಳಿಗೆ ಬೆಂಕಿ ಹಬ್ಬಿದೆ, ಇದರಿಂದ ಸಹೋದರರಾದ ಆನಂದ್, ಆದಿನಾರಾಯಣಪ್ಪ, ಶ್ರೀನಿವಾಸ್, ನಾರಾಯಣಸ್ವಾಮಿ ಹಾಗೂ ವೆಂಕಟಲಕ್ಷ್ಮಮ್ಮ ಎಂಬವವರಿಗೆ ಸೇರಿದ 5 ಗುಡಿಸಲುಗಳಿಗೆ ಬೆಂಕಿ ತಗಲಿದ್ದು ಮನೆಗಳಲ್ಲಿದ್ದ ದಿನಬಳಕೆ ವಸ್ತುಗಳು, ದವಸ ಧಾನ್ಯಗಳು ಸುಟ್ಟು ಕರಕಲಾಗಿವೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ, ಮನೆಗಳಲ್ಲಿನ ಮಹಿಳೆಯರು ಶ್ರಾವಣ ಶನಿವಾರದ ಪ್ರಯುಕ್ತ ನಗರದ ಶನಿಮಹಾತ್ಮ ದೇವಾಲಯಕ್ಕೆ ದರ್ಶನಕ್ಕೆ ಬಂದಿದ್ದರು, ಯಾರಿಗೂ ಯಾವುದೇ ತೊಂದರೆಯಾಗಿಲ್ಲ,  ಗ್ರಾಮಾಂತರ ಠಾಣೆಯ ಎಸ್‍ಐ ಅವಿನಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಮನೆಯಲ್ಲಿ ಸಣ್ಣ ಮಕ್ಕಳು ಇದ್ದು ಆಡುಗೆ ಮಾಡುವುದಕ್ಕೆ ಆಹಾರ ಪಾಧಾರ್ಥಗಳು ಇಲ್ಲದೆ, ರಾತ್ರಿ ಮಲಗಲು ಸ್ಥಳವಿಲ್ಲ ಹಾಕಿಕೊಳ್ಳುವುದಕ್ಕೂ ಬಟ್ಟೆ ಸಹ ಇಲ್ಲದೆ ನಮ್ಮ ಬಾಳು ಬೀದಿಗೆ ಬಂದಿದ್ದು, ಸರ್ಕಾರ ಪರಿಹಾರ ನೀಡಬೇಕೆಂದು ನಾಗಮಣಿ ಮತ್ತಿತರರು ಮನವಿ ಮಾಡಿದ್ದಾರೆ.

Fire-In-Wood-homes-1

Facebook Comments

Sri Raghav

Admin