ಆಕಸ್ಮಿಕ ಬೆಂಕಿ – ಹುಲ್ಲಿನ ಬಣವೆ ನಾಶ
ತುರುವೇಕೆರೆ,ಫೆ.14- ಆಕಸ್ಮಿಕ ಬೆಂಕಿಯಿಂದಾಗಿ ಕಳೆದ ಮೂರು ದಿನಗಳಿಂದ ತಾಲೂಕಿನ ಸಂಗಲಾಪುರ ಗ್ರಾಮದಲ್ಲಿ 16ಕ್ಕೂ ಹೆಚ್ಚು ಹುಲ್ಲಿನ ಬಣವೆಗಳು ಸುಟ್ಟುಹೋಗಿದ್ದು, ರೈತರನ್ನು ಆತಂಕಕ್ಕೀಡು ಮಾಡಿದೆ. ಸೋಮವಾರ ರಾತ್ರಿ ಹುಲ್ಲಿನ ಮೆದೆಗೆ ಕಾಣಿಸಿಕೊಂಡಿದೆ. ಇದ್ದಕ್ಕಿದ್ದಂತೆ ಮಂಗಳವಾರ ಒಂದೆರಡು ಗಂಟೆಗೊಮ್ಮೆ 10 ಮೆದೆಗಳು ಸುಟು ಹೋಗಿದ್ದು ನಿನ್ನೆಯೂ ಸಹ ಅನೇಕ ರೈತರಿಗೆ ಸೇರಿದ ಮೆದೆಗಳು ಬೆಂಕಿ ಆವುತಿಯಾಗುತ್ತಿವೆ. ಗ್ರಾಮಸ್ಥರು ಹಾಗೂ ಎರಡು ಆಗ್ನಿ ಶಾಮಕ ದಳದವರು ಬೆಂಕಿ ನಂದಿಸಲು ಹರ ಸಾಹಸಪಡುತ್ತಿದ್ದಾರೆ.
ಪವಾಡ ಬುಂಜಕ ಡಾ.ಹುಲಿಕಲ್ನಟರಾಜು ಸಂಗಾಲಪುರಕ್ಕೆ ಬುಧವಾರ ಮಧ್ಯಾನಃ ಬೇಟಿ ನೀಡಿ ಸುಟ್ಟು ಹೋದ ಹುಲಿನ ಬಣವೆಗಳನ್ನು ಪರಿಶೀಲಿಸಿ ಯಾವ ಕಾರಣಕ್ಕಾಗಿ ಈ ರೀತಿ ಮೆದೆಗಳು ಸುಟ್ಟು ಹೋಗುತ್ತಿವೆ ಎಂಬುದನ್ನು ಗ್ರಾಮಸ್ಥರ ಜೊತೆ ಚರ್ಚಿಸಲಾಗಿ ದೇವರ ಕೈವಾಡದಿಂದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮಸ್ಥರೊಂದಿಗೆ ಹುಲಿಕಲ್ ನಟರಾಜು ಚರ್ಚಿಸುತ್ತಿದ್ದ ಸಂದರ್ಭದಲ್ಲಿಯೇ ನೋಡುನೋಡುತ್ತಿದ್ದಂತೆ ಅನತಿ ದೂರದಲ್ಲಿ ಮತ್ತೊಂದು ಮೆದೆ ಬೆಂಕಿಯಿಂದ ಹೊತ್ತಿ ಉರಿಯತೊಡಗಿತು. ಗ್ರಾಮದ ಯುವಕರೂ ಸಹ ಬೆಂಕಿ ಬಿದ್ದ ಮೆದೆಗಳನ್ನು ನಂದಿಸಿ ನಂದಿಸಿ ಹೈರಾಣವಾಗಿದ್ದಾರೆ. ಗ್ರಾಮಸ್ಥರು ಹಗಲು ರಾತ್ರಿಯೆನ್ನದೆ ಕಾಯಿತ್ತಿದ್ದು ಆತಂಕಗೊಂಡಿದ್ದಾರೆ.
ಆದರೆ ಡಾ.ಹುಲಿಕಲ್ ನಟರಾಜು ಇದರ ಹಿಂದೆ ಕಾಣದ ಕೈಗಳ ಕೈವಾಡದಿಂದ ಈ ಘಟನೆ ನೆಡೆಯುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದ ಅವರು ಇದರ ಮೂಲ ತಿಳಿಯಲೇಬೇಕೆಂಬ ಉದ್ದೇಶ ಹೊಂದಿ ಗ್ರಾಮದಲ್ಲಿಯೇ ತಂಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.ಸ್ಥಳಕ್ಕೆ ತುಮುಲ್ ಜಿಲ್ಲಾಧ್ಯಕ್ಷ ಸಿ.ವಿ.ಮಹಾಲಿಂಗಯ್ಯ, ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ನಂಜೇಗೌಡ, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ಅರಳಿಕೆರೆರವಿಕುಮಾರ್, ಕಸಾಪ ಅಧ್ಯಕ್ಷ ನಂ.ರಾಜು, ಪ್ರೋ.ಪುಟ್ಟರಂಗಪ್ಪ, ಸಾ.ಶಿ.ದೇವರಾಜು, ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡ ಸೇರಿದಂತೆ ಹಲವು ಮುಖಂಡರು ಭೇಟಿ ನೀಡಿ ಆಗಿರುವ ದುರಂತವನ್ನು ವೀಕ್ಷಿಸಿದರು. ಪಿಎಸ್ಐ ರಾಜು ಸೇರಿದಂತೆ ಪೋಲೀಸ್ ಸಿಬ್ಬಂದಿ ಗ್ರಾಮದಲ್ಲಿ ಮೊಕ್ಕಾಂ ಹೂಡಿದೆ.