ಪೊಲೀಸರು ಆ್ಯಸಿಡ್ ನಾಗ ಅವಿತುಕೊಂಡಿದ್ದ ಇದ್ದ ಬಿಲ ಹುಡುಕಿದ್ದು ಹೇಗೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ14- ತಮಿಳು ಭಾಷೆಯಲ್ಲಿ ಹಂಚಲಾಗಿದ್ದ ಕರಪತ್ರದಲ್ಲಿರುವ ವ್ಯಕ್ತಿ ರಮಣ ಆಶ್ರಮದಲ್ಲಿ ಇರುವುದನ್ನು ಗಮನಿಸಿದ ಗಾರ್ಮೆಂಟ್ಸ್ ಉದ್ಯೋಗಿಯೊಬ್ಬರು ಪೊಲೀಸರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದರು. ಆ್ಯಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿ ನಾಗೇಶನ ಪತ್ತೆಗಾಗಿ ತಮಿಳುನಾಡಿನ ತಿರುಮಣ್ಣಮಲೈ ರಮಣ ಆಶ್ರಮದ ಬಳಿಯೂ ಕರಪತ್ರಗಳನ್ನು ಹಂಚಲಾಗಿತ್ತು.

ರಮಣ ಆಶ್ರಮದಲ್ಲಿ ಭಕ್ತರಂತೆ ಖಾವಿ ವೇಷ ಧರಿಸಿ ಧ್ಯಾನ ಮಾಡುತ್ತಾ ಕುಳಿತಿದ್ದ ಆರೋಪಿಯ ಚಹರೆ ಕರಪತ್ರದಲ್ಲಿರುವ ವ್ಯಕ್ತಿಯ ಹೋಲಿಕೆ ಆಗುತ್ತಿರುವುದನ್ನು ಉದ್ಯೋಗಿ ಗಮನಿಸಿ ಕರಪತ್ರದಲ್ಲಿದ್ದ ಕಾಮಾಕ್ಷಿಪಾಳ್ಯ ಠಾಣೆ ಇನ್‍ಸ್ಪೆಕ್ಟರ್ ಪ್ರಶಾಂತ್ ಮೊಬೈಲ್‍ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ತಕ್ಷಣ ಇನ್‍ಸ್ಪೆಕ್ಟರ್ ಆ ವ್ಯಕ್ತಿಗೆ ವಾಟ್ಸಪ್‍ನಿಂದ ಫೆÇೀಟೋ ಕಳಿಸುವಂತೆ ಹೇಳಿದ್ದಾರೆ. ಅದರಂತೆ ಆ ವ್ಯಕ್ತಿ ಖಾವಿ ವೇಷ ಧರಿಸಿ ಧ್ಯಾನಕ್ಕೆ ಕುಳಿತಿದ್ದ ನಾಗೇಶನ ಫೋಟೊ ತೆಗೆದು ಇನ್‍ಸ್ಪೆಕ್ಟರ್‍ಗೆ ಕಳುಹಿಸಿದ್ದಾರೆ. ಫೋಟೋ ನೋಡಿದ ಇನ್‍ಸ್ಪೆಕ್ಟರ್ ಇದು ಆರೋಪಿ ನಾಗೇಶನೇ ಎಂಬುದನ್ನು ಖಚಿತಪಡಿಸಿಕೊಂಡು ತಕ್ಷಣ ಮಾಹಿತಿ ಕೊಟ್ಟ ವ್ಯಕ್ತಿಯನ್ನು ಆ ಸ್ಥಳದಲ್ಲೇ ಇರುವಂತೆ ಸೂಚಿಸಿ, ತಕ್ಷಣ ತಮಿಳುನಾಡಿನ ಧಾರ್ಮಿಕ ಸ್ಥಳಗಳಲ್ಲಿ ಆತನಿಗಾಗಿ ಹುಡುಕುತ್ತಿದ್ದ ತಂಡಕ್ಕೆ ಮಾಹಿತಿ ರವಾನಿಸಿದ್ದಾರೆ.

ತಕ್ಷಣ ಈ ತಂಡ ರಮಣ ಆಶ್ರಮದ ಬಳಿ ಹೋಗಿ ಮಾಹಿತಿ ನೀಡಿದ್ದ ವ್ಯಕ್ತಿಯನ್ನು ಸಂಪರ್ಕಿಸಿದಾಗ ಆತ ಆಶ್ರಮದ ಒಳಗೆ ಕರೆದೊಯ್ದು ಧ್ಯಾನ ಮಾಡುತ್ತ ಕುಳಿತಿದ್ದ ವ್ಯಕ್ತಿಯನ್ನು ತೋರಿಸಿ ತನ್ನ ಪಾಡಿಗೆ ಅಲ್ಲಿಂದ ತೆರಳಿದ್ದಾರೆ.

ಭಕ್ತರಂತೆ ಕುಳಿತ ಪೆÇಲೀಸ್ ತಂಡ:
ಆರೋಪಿ ನಾಗೇಶ ಧ್ಯಾನ ಮಾಡುತ್ತ ಕುಳಿತಿದ್ದಾಗ ಆತನ ಹಿಂಬದಿ ಹೋಗಿ ಈ ತನಿಖಾ ತಂಡ ಭಕ್ತರ ಸೋಗಿನಲ್ಲಿ ಕುಳಿತುಕೊಂಡಿದೆ. ಧ್ಯಾನ ಮುಗಿದ ಬಳಿಕ ನಿಮ್ಮ ಹೆಸರು ಏನೆಂದು ಕೇಳಿದ್ದಾರೆ. ಆದರೆ ಆತ ಹೆಸರು ಹೇಳಿಲ್ಲ. ಕೆಲ ಸಮಯದ ಬಳಿಕ ಮತ್ತೆ ಒತ್ತಾಯ ಮಾಡಿ ಕೇಳಿದಾಗ ನಾಗೇಶ ಎಂದು ಹೇಳಿದ್ದಾನೆ.

ಈತ ಆರೋಪಿ ನಾಗೇಶನೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆತನನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆತನ ಬಲಗೈ ಮೇಲೆ ಸುಟ್ಟ ಗಾಯ ಇರುವುದನ್ನು ಖಾತ್ರಿ ಮಾಡಿಕೊಂಡು ತಕ್ಷಣ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ತಪ್ಪು ಒಪ್ಪಿಕೊಂಡಿದ್ದಾನೆ. ಕಾಮಾಕ್ಷಿಪಾಳ್ಯ ಠಾಣೆ ಇನ್‍ಸ್ಪೆಕ್ಟರ್ ಅವರನ್ನೊಳಗೊಂಡ ತಂಡ ತಕ್ಷಣ ಬೆಂಗಳೂರಿನಿಂದ ತಮಿಳುನಾಡಿಗೆ ತೆರಳಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

10 ಸಾವಿರ ಬಹುಮಾನ : ಆರೋಪಿ ಬಗ್ಗೆ ಸುಳಿವು ನೀಡಿದ ತಮಿಳುನಾಡಿನ ಗಾರ್ಮೆಂಟ್ಸ್ ಉದ್ಯೋಗಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು 10 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.

Facebook Comments