ತಕ್ಷಣ ಅಸಿಡಿಟಿ ನಿವಾರಣೆಗೆ ಇಲ್ಲಿದೆ ಪವರ್ ಫುಲ್ ಮದ್ದು..!

ಈ ಸುದ್ದಿಯನ್ನು ಶೇರ್ ಮಾಡಿ

ಅಸಿಡಿಟಿ ಎನ್ನುವುದು ಬಹಳ ಸಾಮಾನ್ಯವಾದ ಸಮಸ್ಯೆ. ಇದು ಆರೋಗ್ಯದಲ್ಲಿ ಕಾಣಿಸಿಕೊಳ್ಳಲು ಯಾವುದೇ ಕಡಿವಾಣಗಳಿಲ್ಲ. ರಾತ್ರಿ, ಹಗಲು ಎನ್ನುವ ತಾರತಮ್ಯವಿಲ್ಲದೆ ಕಾಣಿಸಿಕೊಳ್ಳುತ್ತದೆ.

ಸರಿಯಾದ ಸಮಯಕ್ಕೆ ಊಟ-ತಿಂಡಿ ಮಾಡದೆ ಇರುವುದು, ದೀರ್ಘ ಸಮಯಗಳ ಕಾಲ ಕಾಲಿ ಹೊಟ್ಟೆಯಲ್ಲಿ ಇರುವುದು, ಅತಿಯಾದ ಮಸಾಲೆ ಪದಾರ್ಥಗಳ ಸೇವನೆ, ಅತಿಯಾದ ಎಣ್ಣೆಯುಕ್ತ ಪದಾರ್ಥಗಳು, ಅತಿಯಾದ ಖಾರ ಸೇವನೆ, ಅನುಚಿತವಾದ ಜೀವನ ಶೈಲಿ, ಅತಿಯಾದ ಮದ್ಯ ಸೇವನೆಗಳಂತಹ ಕಾರಣಗಳಿಗೆ ದೇಹದಲ್ಲಿ ಆಮ್ಲೀಯತೆ ಅತಿಯಾಗಿ ಉತ್ಪತ್ತಿಯಾಗುವುದು.

ನಂತರ ಇದು ಹುಳಿ ತೇಗು, ಎದೆ ಉರಿ, ಹೊಟ್ಟೆ ಸುಡುವ ಸಂವೇದನೆ, ವಾಂತಿಯಂತಹ ತೊಂದರೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಆಮ್ಲೀತೆಯ ಸಮಸ್ಯೆ ಇದ್ದರೆ ಸಾಮಾನ್ಯವಾಗಿ ಮೂತ್ರವು ಕೆಂಪು ಮತ್ತು ಗುಲಾಬಿ ಬಣ್ಣಗಳಲ್ಲಿ ಕಾಣಿಸಿಕೊಳ್ಳುತ್ತದೆ. ಜೀರ್ಣಕ್ರಿಯೆಯಲ್ಲಿ ಅತಿಯಾದ ಆಮ್ಲೀಯತೆ ಉಂಟಾದರೆ ಹೊಟ್ಟೆ ಉರಿ, ಹೊಟ್ಟೆ ಉಬ್ಬರ ಪದೇ ಪದೇ ಉಂಟಾಗುವುದು. ಕೆಲವರಿಗೆ ಅನ್ನನಾಳದಲ್ಲಿ ಕೆಂಪು ಗುಳ್ಳೆಗಳು ಉಂಟಾಗಬಹುದು. ಆಮ್ಲೀಯತೆ ಹೆಚ್ಚಾದರೆ ಕರುಳಲ್ಲಿ ಹುಣ್ಣಾಗುವ ಸಾಧ್ಯತೆಗಳಿವೆ.

ನಂತರ ಅದು ನಿಧಾನವಾಗಿ ಕರುಳು ಹುಣ್ಣು ಎನಿಸಿಕೊಳ್ಳುತ್ತದೆ. ಒಮ್ಮೆ ಆಮ್ಲೀಯ ಸಮಸ್ಯೆ ಅಥವಾ ಅಸಿಡಿಟಿ ಉಂಟಾಯಿತು ಎಂದಾಗ ಅದಕ್ಕೆ ಸೂಕ್ತವಾದ ಆರೈಕೆ ಅಥವಾ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಉತ್ತಮ.

ತುಳಸಿ ಎಲೆಗಳು: ತುಳಸಿ ಎಲೆಗಳು ಅಸಿಡಿಟಿಗೆ ಶೀಘ್ರ ಉಪಶಮನವನ್ನು ನೀಡುತ್ತವೆ. ತುಳಸಿ ಎಲೆಗಳಲ್ಲಿ ಕಾರ್ಮನಿಟೇವ್ ಎಂಬ ಅಂಶಗಳು ಇರುತ್ತವೆ. ಇವು ಅಸಿಡಿಟಿಯನ್ನು ಹೋಗಲಾಡಿಸುವಲ್ಲಿ ಪವಾಡ ಸದೃಶ್ಯವಾಗಿ ಕೆಲಸ ಮಾಡುತ್ತದೆ. ನಿಮಗೆ ಅಸಿಡಿಟಿ ಸಮಸ್ಯೆ ಇದ್ದಲ್ಲಿ ಒಂದಷ್ಟು ತುಳಸಿ ಎಲೆಗಳನ್ನು ಅಗಿಯಿರಿ ಸಾಕು.

ಶುಂಠಿ : ಅಸಿಡಿಟಿ ಬಂದಾಗ ಔಷಧದ ಬಾಕ್ಸ್ ನೋಡುವ ಮೊದಲು ತರಕಾರಿ ಬುಟ್ಟಿಯನ್ನು ನೋಡಿ. ಅಲ್ಲಿ ನಿಮಗೆ ಶುಂಠಿ ಕಾಣಿಸುತ್ತದೆ. ಶುಂಠಿಯನ್ನು ಸಣ್ಣ ಪ್ರಮಾಣದಲ್ಲಿ ಕತ್ತರಿಸಿಕೊಂಡು ಅದನ್ನು ಅಗಿಯಿರಿ. ಇದರಿಂದ ಅಸಿಡಿಟಿ ಸಮಸ್ಯೆ ದೂರವಾಗುತ್ತದೆ.

ಚಕ್ಕೆ : ಸಾಂಬಾರು ಪದಾರ್ಥವಾದ ಚಕ್ಕೆಯ ಪ್ರಯೋಜನಗಳು ಹಲವಾರು. ಇದು ಅಸಿಡಿಟಿಯನ್ನು ನಿವಾರಿಸುವ ಅತ್ಯಂತ ಪರಿಣಾಮಕಾರಿ ಮನೆ ಮದ್ದಾಗಿದೆ. ಇತರೆ ಔಷಧಿಗಳನ್ನು ಸೇವಿಸುವ ಬದಲಿಗೆ ಚಕ್ಕೆಯಿಂದ ತಯಾರಿಸಿದ ಟೀಯನ್ನು ಸೇವಿಸಿ. ಅಸಿಡಿಟಿಯಿಂದ ಮುಕ್ತರಾಗಿ. ನಿಮಗೆ ಬೇಕಾದಲ್ಲಿ ಚಕ್ಕೆಯ ಪುಡಿಯನ್ನು ನೀವು ತಯಾರಿಸುವ ಖಾದ್ಯಗಳಿಗೆ ಬೆರೆಸಿಕೊಳ್ಳಬಹುದು.

ಜೀರಿಗೆ : ಆರ್ಯುರ್ವೇದದ ಪ್ರಕಾರ ಅಸಿಡಿಟಿಯನ್ನು ನಿವಾರಿಸಲು ಹಲವಾರು ಪದಾರ್ಥಗಳು ನೆರವಿಗೆ ಬರುತ್ತವೆ. ಜೀರಿಗೆ ಸಹ ಅವುಗಳಲ್ಲಿ ಒಂದು. ಇದು ನಮ್ಮ ಜೀರ್ಣಕ್ರಿಯೆಗೆ ಅಗತ್ಯವಾದ ಲಾಲಾ ರಸವನ್ನು ಹೆಚ್ಚು ಉತ್ಪತ್ತಿಸುವಂತೆ ಮಾಡುತ್ತದೆ. ಜೀರಿಗೆಯನ್ನು ಬೆರೆಸಿ ನೀರನ್ನು ಕುದಿಸಿ, ಅದನ್ನು ಕುಡಿಯುವುದರಿಂದ ಅಸಿಡಿಟಿಯನ್ನು ನಿವಾರಿಸಿಕೊಳ್ಳಬಹುದು

ತಣ್ಣಗಿನ ಹಾಲು : ಹಾಲಿನಲ್ಲಿ ಕ್ಯಾಲ್ಸಿಯಂ ಯಥೇಚ್ಛವಾಗಿರುತ್ತದೆ. ಈ ಕ್ಯಾಲ್ಸಿಯಂ ನಮ್ಮ ಉದರದಲ್ಲಿ ಅಸಿಡ್ ಸಂಚಯಗೊಳ್ಳುವುದನ್ನು ತಡೆಯುತ್ತದೆ. ಒಂದು ಲೋಟ ಹಾಲನ್ನು ಸೇವಿಸುವುದರಿಂದಾಗಿ ಅಸಿಡಿಟಿಯನ್ನು ದೂರವಿಡಬಹುದು. ತಣ್ಣಗಿನ ಹಾಲು ಹೊಟ್ಟೆ ಉರಿಯಿಂದ ತಕ್ಷಣ ಉಪಶಮನ ನೀಡುತ್ತದೆ. ಇದನ್ನು ತಣ್ಣಗಿನ ಹಾಲನ್ನು ಸೇವಿಸುವಾಗ ನೀವು ಸಹ ಗಮನಿಸಬಹುದು. ಸಕ್ಕರೆ ಇಲ್ಲದ, ಕೆನೆ ತೆಗೆದ ಹಾಲು ಅಸಿಡಿಟಿಯ ಮೇಲೆ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಸೋಂಪು : ಆಂಗ್ಲ ಭಾಷೆಯಲ್ಲಿ ಫೆನ್ನೆಲ್ ಎಂದು ಕರೆಯಲ್ಪಡುವ ಇದು ಅತ್ಯುತ್ತಮವಾದ ಬಾಯಿ ದುರ್ವಾಸನೆ ನಿರೋಧಕವಾಗಿದೆ. ಸೌಂಫ್‍ನಲ್ಲಿ ಹಲವಾರು ಪ್ರಯೋಜನಗಳು ಅಡಗಿವೆ. ಅವುಗಳು ಹೀಗಿವೆ- ಇದು ಅತ್ಯುತ್ತಮವಾದ ಜೀರ್ಣಶಕ್ತಿ ಪ್ರಚೋದಕ, ಮಲಬದ್ದತೆಯನ್ನು ನಿವಾರಿಸುತ್ತದೆ. ಇದರಲ್ಲಿ ಫ್ಲೇವನೋಯ್ಡ್ಸ್ ಇದ್ದು, ಯಥೇಚ್ಛವಾದ ವೊಲಟೈಲ್ ಹೊಂದಿದೆ. ಇದರಲ್ಲಿ ಪ್ಲಮಿಟಿ ಆಸಿಡ್ ಹಾಗು ಇನ್ನಿತರ ಅಂಶಗಳು ಇವೆ. ಇದು ಅಲ್ಸರ್ ರೋಗ ಬರದಂತೆ ತಡೆಯುವ ಅಂಶಗಳನ್ನು ತನ್ನಲ್ಲಿ ಹೊಂದಿದೆ. ಇವುಗಳೆಲ್ಲದರ ಜೊತೆಗೆ ಇದನ್ನು ಸೇವಿಸಿದ ತಕ್ಷಣ ಹೊಟ್ಟೆ ತಣ್ಣಗೆ ಹಾಗುತ್ತದೆ. ಹಾಗಾಗಿ ಇದು ಅಸಿಡಿಟಿಯಿಂದ ತಕ್ಷಣ ಉಪಶಮನವನ್ನು ನೀಡುತ್ತದೆ. ಅದಕ್ಕಾಗಿಯೇ ಹೋಟೆಲ್‍ಗಳಲ್ಲಿ ಊಟವಾದ ನಂತರ ಸೌಂಫನ್ನು ನೀಡುತ್ತಾರೆ. ಒಂದು ವೇಳೆ ನಿಮಗೆ ಅಸಿಡಿಟಿಯಿಂದ ಸಮಸ್ಯೆ ಉಂಟಾದಲ್ಲಿ ಕೆಲವು ಕಾಳು ಸೌಂಫನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿ, ರಾತ್ರಿಯಿಡಿ ಅವುಗಳನ್ನು ಹಾಗೆಯೇ ಬಿಡಿ. ಯಾವಾಗ ನಿಮಗೆ ಅಸಿಡಿಟಿಯಿಂದ ಭಾದೆಯುಂಟಾಗುತ್ತದೊ, ಆಗ ಈ ನೀರನ್ನು ಸೇವಿಸಿ.

Facebook Comments