ದುರ್ಬಲರ ಜೀವನ ಸುಧಾರಣೆಗೆ ಪರಿವರ್ತಕರಾಗಿ : ರಾಜ್ಯಪಾಲರಿಗೆ ರಾಷ್ಟ್ರಪತಿ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

Kovind--0101

ನವದೆಹಲಿ,ಜೂ.4-ದುರ್ಬಲ ಜೀವನ ಸುಧಾರಿಸಲು ಹಾಗೂ ಆ ಜನಾಂಗದ ಉನ್ನತ ಶಿಕ್ಷಣ ಮಟ್ಟವನ್ನು ಹೆಚ್ಚಿಸಲು ಪರಿವರ್ತಕರಾಗಿ ಕಾರ್ಯ ನಿರ್ವಹಿಸಬೇಕೆಂದು ವಿವಿಧ ರಾಜ್ಯಗಳ ರಾಜ್ಯಪಾಲರಿಗೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಕರೆ ನೀಡಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದಿನಿಂದ ಆರಂಭವಾಗಿರುವ ದೇಶದ ವಿವಿಧ ರಾಜ್ಯಗಳ ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗೌರ್ನರ್‍ಗಳ ಎರಡು ದಿನಗಳ ಸಮಾವೇಶದಲ್ಲಿ ಕೋವಿಂದ್ ಮಾತನಾಡಿದರು.

ಯಾವುದೇ ರಾಜ್ಯವಿರಲಿ ರಾಜ್ಯಪಾಲರು ಅತ್ಯಂತ ಪ್ರಮುಖ ಕಾರ್ಯ ನಿರ್ವಹಿಸುತ್ತಾರೆ. ರಾಜ್ಯ ಸರ್ಕಾರಕ್ಕೆ ಮಾರ್ಗದರ್ಶಕರಾಗಿ ಅವರು ಕಾರ್ಯ ನಿರ್ವಹಿಸುತ್ತಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಅವರು ಮುಖ್ಯ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಾರೆ ಎಂದು ರಾಷ್ಟ್ರಪತಿ ಬಣ್ಣಿಸಿದರು.  ರಾಜ್ಯದ ಜನರು ರಾಜ್ಯಪಾಲರ ಕಾರ್ಯಾಲಯ ಅಥವಾ ರಾಜಭವನವನ್ನು ಆದರ್ಶ ಮತ್ತು ಮೌಲ್ಯಗಳ ಕೇಂದ್ರ ಎಂಬ ದೃಷ್ಟಿಯಿಂದ ನೋಡುತ್ತಾರೆ. ಈ ಹಿನ್ನೆಲೆಯಲ್ಲಿ ದುರ್ಬಲ ಜೀವನ ಸುಧಾರಿಸಲು ಹಾಗೂ ಆ ಜನಾಂಗದ ಉನ್ನತ ಶಿಕ್ಷಣ ಮಟ್ಟವನ್ನು ಹೆಚ್ಚಿಸಲು ಪರಿವರ್ತಕರಾಗಿ ಕಾರ್ಯ ನಿರ್ವಹಿಸಬೇಕೆಂದು ರಾಷ್ಟ್ರಪತಿ ಕರೆ ನೀಡಿದರು.

Facebook Comments

Sri Raghav

Admin