ಕಳ್ಳಾಟವಾಡುವ ಖಾಸಗಿ ಆಸ್ಪತ್ರೆಗಳ ವಿರುದ್ದ ಕ್ರಮ : ಮಂಜುನಾಥ್ ಪ್ರಸಾದ್ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.4- ಕೊರೊನಾ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡದೆ ಸತಾಯಿಸುವ ಹಾಗೂ ಸುಳ್ಳು ಹೇಳಿ ಕಳ್ಳಾಟ ಮಾಡಿದರೆ ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಎಚ್ಚರಿಸಿದರು.

ನಮ್ಮ ಕಡೆಯಿಂದ ಪ್ರತಿಯೊಂದು ಆಸ್ಪತ್ರೆಗೆ ಹೆಲ್ಪ್ ಡೆಸ್ಕ್ ಮಾಡಬೇಕು, ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ವ್ಯವಸ್ಥೆ ಸಿಗುತ್ತದೆ. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆ ಮೃತದೇಹ ನೀಡುವುದಕ್ಕೆ ಸಮಸ್ಯೆಯಾಗುತ್ತಿದೆ.

ಹಾಗಾಗಿ ನಮ್ಮ ಹೆಲ್ಪ್ ಡೆಸ್ಕ್ ಇದ್ದರೆ ಸರಿಯಾದ ಕಮ್ಯುನಿಕೇಷನ್ ಆಗುತ್ತದೆ. ಹಾಗು ಒಂದು ಬೆಡ್ ಖಾಲಿಯಾದರೆ ಮತ್ತೊಬ್ಬರನ್ನು ಅಲ್ಲಿಗೆ ಸೇರಿಸಲು ಸರಿಯಾಗುತ್ತದೆ, ನಮ್ಮ ರಿಲೇಷನ್ ಒಬ್ರು ಅಡ್ಮಿಟ್ ಆಗಿದ್ದರು ನಿನ್ನೆ ಡೆತ್ ಆಗಿದ್ದಾರೆ.

ರಾಜಾಜಿನಗರದ ಖಾಸಗಿ ಆಸ್ಪತ್ರೆ ನಾಲ್ಕುವರೆ ಲಕ್ಷ ಬಿಲ್‍ಮಾಡಿದೆ. ಅದು ನನ್ನ ಗಮನಕ್ಕೂ ಬಂದಿಲ್ಲ ಡೆತ್ ಆದ ನಂತರ ಗೊತ್ತಾಗಿದೆ. ಎಲ್ಲಾ ಕಡೆ ಈ ರೀತಿಯಾಗಿದೆ ಇದಕ್ಕೂ ಕಡಿವಾಣ ಹಾಕಬೇಕಿದೆ ಎಂದು ಪಾಲಿಕೆ ಸಭೆಯಲ್ಲಿ ಅವರು ತಿಳಿಸಿದರು.

ಕೊರೊನಾ ತಡೆಯಲು ಬೂತ್ ಮಟ್ಟದ ಕಮಿಟಿ ರಚನೆ ಮಾಡಲಾಗಿದೆ. ಪ್ರತೀ 400-500 ಮನೆಗಳಿಗೆ ಒಂದು ಬೂತ್ ಮಟ್ಟದ ಕಮಿಟಿ ರಚಿಸಲಾಗಿದೆ. ಇದಕ್ಕಾಗಿ ಎನ್‍ಎಸ್‍ಎಸ್, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಬಿಎಂಪಿ 141 ಪ್ರೈಮರಿ ಹೆಲ್ತ್ ಸೆಂಟರ್‍ಗಳಲ್ಲಿ ಟೆಸ್ಟ್ ನಡೆಯುತ್ತಿದೆ. ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಮಾಡಲಾಗುತ್ತಿದೆ. ಅದರಲ್ಲಿ ಬದಲಾಗೊ ಬಣ್ಣದಲ್ಲಿ ಪಾಸಿಟಿವ್, ನೆಗೆಟೀವ್ ತಿಳಿಯಲಿದೆ ಎಂದು

ಒಬ್ಬ ವ್ಯಕ್ತಿ ರ್ಯಾಪಿಡ್ ಆಂಟಿಜೆನ್ ಟೆಸ್ಟ್‍ನಲ್ಲಿ ಪಾಸಿಟಿವ್ ಬಂದು, ಸಿಂಪ್ಟಮ್ಸ್ ಇಲ್ಲದಿದ್ದರೆ ನೆಗೆಟೀವ್. ಒಂದು ವೇಳೆ ಪಾಸಿಟಿವ್ ಬಂದು ಸಿಂಪ್ಟಮ್ಸ್ ಇದ್ರೆ, ಆರ್‍ಸಿಪಿಆರ್ ಟೆಸ್ಟ್ ಮಾಡಲಾಗುವುದು. ಅದರಲ್ಲಿ ಪಾಸಿಟಿವ್ ಬಂದರೆ ಅವರನ್ನು ಐಸೋಲೇಷನ್ ಮಾಡಲಾಗುವುದು ಎಂದು ತಿಳಿಸಿದರು.

ಪ್ರತಿಯೊಬ್ಬರಿಗೆ ಕರೆ ಮಾಡಿ ಅವರ ಆರೋಗ್ಯ ಬಗ್ಗೆ ಮಾಹಿತಿ ಪಡೆಯಲಾಗುವುದು. ಮನೆಯಲ್ಲೆ ಇರಲು ವ್ಯವಸ್ಥೆ ಇದ್ದರೆ, ಮನೆಯಲ್ಲೇ ಕ್ವಾರಂಟೈನ್ ಮಾಡಲಾಗುವುದು.

ಇತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರನ್ನು ಐಸೋಲೇಷನ್ ಮಾಡಲಾಗುವುದು. ಒಂದು ವಾರದಲ್ಲಿ ಮೂರು ಸಾವಿರ ಇದ್ದ ಟೆಸ್ಟನ್ನು ಆರು ಸಾವಿರಕ್ಕೆ ಏರಿಸಲಾಗಿದೆ. ಇದಕ್ಕಾಗಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಇಪ್ಪತ್ತು ಸಾವಿರಕ್ಕೆ ಟೆಸ್ಟ್ ಏರಿಸಲಾಗುವುದು. ಈವರೆಗೂ 5 ಸಾವಿರ ಪೌರಕಾರ್ಮಿಕರಿಗೆ, ಡ್ರೈವರ್‍ಗಳಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿದೆ. 156 ಜನ ಪೌರ ಕಾರ್ಮಿಕರಿಗೆ ಪಾಸಿಟಿವ್ ಬಂದಿದೆ.

4664 ಮಂದಿ ಪೌರ ಕಾರ್ಮಿಕರಿಗೆ ಟೆಸ್ಟ್ ಮಾಡಿಸಲಾಗುತ್ತಿದೆ. ಇದರಲ್ಲಿ 156 ಪೌರ ಕಾರ್ಮಿಕರಿಗೆ ಪಾಸಿಟಿವ್ ಬಂದಿದೆ. ಅವರಿಗೆಲ್ಲಾ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮ ವಾರಿಯರ್ಸ್ ಗಳಿಗೆ ಸರಿಯಾದ ಚಿಕಿತ್ಸೆ ನೀಡಲು ಸಿಎಂ ಹೇಳಿದ್ದಾರೆ.

ಶಿವಾಜಿ ನಗರದಲ್ಲಿ ಹೊಸದೊಂದು ಕೋವಿಡ್ ಆಸ್ಪತ್ರೆ ಸಿದ್ದವಾಗುತ್ತಿದೆ. ಅದರಲ್ಲಿ 50 ರಷ್ಟು ಬೆಡ್ ಗಳನ್ನು ವಾರಿಯರ್ಸ್‍ಗಳಿಗೆ ಮೀಸಲಿಡಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆಗೆ ನಾನೇ ಖುದ್ದಾಗಿ ಭೇಟಿ ನೀಡಿದ್ದೆ. ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಎಲ್ಲೆಡೆ ಭೇಟಿ ಮಾಡಿದ್ದೆ. ಇಲ್ಲಿಗೆ ಬಂದ ಮೇಲೆ ಸಾಕ್ರಾ ಆಸ್ಪತ್ರೆಗೆ ಭೇಟಿ ಮಾಡಿದ್ದೆ. ಸರ್ಕಾರದಿಂದ ಒಂದು ಸುತ್ತೋಲೆ ಹೊರಡಿಸಲಾಗಿದೆ. ಅದರಂತೆ ಶೇ.50 ರಷ್ಟು ಬೆಡ್‍ಗಳನ್ನ ಕೋವಿಡ್ ಬೆಡ್ ಆಗಿ ಮಿಸಲಿಡಬೇಕು.

ನಾವು ಕಳಿಸುವ ಕೋವಿಡ್ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕು. ಅದರ ವೆಚ್ಚವನ್ನು ನಾವು ಭರಿಸುವುದಾಗಿ ತಿಳಿಸಿದ್ದೇವೆ ಎಂದರು.
ಆಯುಷ್ಮಾನ್ ಭಾರತ್ ಅಡಿಯಲ್ಲಿ ಬಿಲ್ ಪಾವತಿ ಮಾಡಲು ನಿರ್ಧಾರ ಮಾಡಲಾಗಿದೆ.

ಕೋವಿಡ್ ಬಂದ ಮೇಲೆ ಅನೇಕ ವೈದ್ಯರು ಮತ್ತು ನರ್ಸ್ ಗಳು ಕೆಲಸ ಬಿಟ್ಟು ಹೋಗಿದ್ದಾರೆ. ಅವರು ಬಂದ ಮೇಲೆ ನಾವು ಸಹಕಾರ ನೀಡಬಹುದು ಎನ್ನುತ್ತಿದ್ದಾರೆ. ಮೊದಲು ಬಿಬಿಎಂಪಿ ಆಯುಕ್ತರಿಗೆ ಯಾವುದೇ ಕ್ರಮ ಕೈಗೊಳ್ಳಲು ಅವಕಾಶ ಇರಲಿಲ್ಲ.

ಇದೀಗ ಕಾಯ್ದೆ ತಿದ್ದುಪಡಿ ಮಾಡಿ ಅವಕಾಶ ಮಾಡಿಕೊಡಲಾಗಿದೆ. ಎಲ್ಲಾ ಆಸ್ಪತ್ರೆಗಳಲ್ಲಿ ಬಿಬಿಎಂಪಿ ಇಂದ ಹೆಲ್ಪ್ ಡೆಸ್ಕ್ ಮಾಡುತ್ತೇವೆ. ಶವಗಳನ್ನು ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಂಜುನಾಥ್ ಪ್ರಸಾದ್ ಸ್ಪಷ್ಟಪಡಿಸಿದರು.

Facebook Comments

Sri Raghav

Admin