ಪ್ರೇರಣಾ ಜೊತೆ ಎಂಗೇಜ್ ಆದ ಆ್ಯಕ್ಷನ್ ಪ್ರಿನ್ಸ್ ಧೃವಸರ್ಜಾ

ಈ ಸುದ್ದಿಯನ್ನು ಶೇರ್ ಮಾಡಿ

Dhruva--01

ಬೆಂಗಳೂರು, ಡಿ.9- ಆ್ಯಕ್ಷನ್ ಪ್ರಿನ್ಸ್ ಧೃವಸರ್ಜಾ ಅವರ ನಿಶ್ಚಿತಾರ್ಥ ಇಂದು ಬನಶಂಕರಿಯ ಧರ್ಮಗಿರಿ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ನೆರವೇರಿತು.
ಬಾಲ್ಯದ ಗೆಳತಿ ಪ್ರೇರಣಾ ಶಂಕರ್‍ರೊಂದಿಗೆ ಧೃವಸರ್ಜಾ ಉಂಗುರ ಬದಲಾಯಿಸಿಕೊಂಡರು.

ಹದಿನಾರು ವರ್ಷದಿಂದ ಪ್ರೀತಿಸುತ್ತಿದ್ದ ಧೃವ ಸರ್ಜಾ ಬಾಲ್ಯದ ಗೆಳತಿಯನ್ನು ವರಿಸಲಿದ್ದಾರೆ. ಧೃವ ಸರ್ಜಾ ಆಂಜನೇಯನ ಭಕ್ತನಾಗಿದ್ದು, ಆಂಜನೇಯ ದೇವಸ್ಥಾನದಲ್ಲಿಯೇ ನಿಶ್ಚಿತಾರ್ಥ ಮಾಡಿಕೊಳ್ಳಬೇಕು ಎಂಬ ಆಸೆಯನ್ನು ಹೊಂದಿದ್ದರು. ಅದರಂತೆಯೇ ಇಂದು ಆಂಜನೇಯ ದೇವಸ್ಥಾನದಲ್ಲಿ ಕುಟುಂಬ ಮತ್ತು ಬಂಧು-ಮಿತ್ರರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿಸಿಕೊಂಡರು.

ಕಲಾ ನಿರ್ದೇಶಕ ಅರುಣ್ ಸಾಗರ್ ಅವರ ಕಲಾ ನಿರ್ದೇಶನದಲ್ಲಿ ಮಾವಿನ ಸೊಪ್ಪು, ತೆಂಗಿನ ಗರಿಯ ತಳಿರು-ತೋರಣಗಳಿಂದ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ಧೃವಸರ್ಜಾ ಅವರು ತನ್ನ ಬಾಳ ಸಂಗಾತಿಗೆ ವಜ್ರದ ಉಂಗುರ ಖರೀದಿ ಮಾಡಿದ್ದಾರೆ ಎಂಬ ಸುದ್ದಿಯೂ ಕೇಳಿಬಂದಿದೆ.  ಕಳೆದ ತಿಂಗಳು ನಿಶ್ಚಿತಾರ್ಥ ನಡೆಯುತ್ತದೆ ಎಂದು ಕೇಳಿಬಂದಿತ್ತು. ಇದೇ ತಿಂಗಳ ಕೊನೆಯಲ್ಲಿ ಮದುವೆಯಾಗಲಿದೆ ಎಂಬ ಮಾತುಗಳು ಕೂಡ ಕೇಳಿಬಂದಿವೆ.

Facebook Comments