‘ಕಿಲಾಡಿ’ಯನ್ನೂ ಬಿಡದ ಕೊರೋನಾ, ಅಕ್ಷಯ್‍ ಕುಮಾರ್‌ಗೆ ಪಾಸಿಟಿವ್..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಏ.4- ಬಾಲಿವುಡ್ ನಟ ಅಕ್ಷಯ್‍ಕುಮಾರ್‍ಗೆ ಕೊರೊನಾ ಸೋಂಕು ತಗುಲಿದೆ. 53 ವರ್ಷದ ಅಕ್ಷಯ್‍ಕುಮಾರ್ ಈ ಬಗ್ಗೆ ಟ್ವಿಟರ್‍ನಲ್ಲಿ ಹೇಳಿಕೊಂಡಿದ್ದು, ನನಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಕೆಲವು ಶಿಷ್ಟಾಚಾರಗಳನ್ನು ಆಧರಿಸಿ ನಾನು ಹೋಮ್ ಕ್ವಾರಂಟೈನ್‍ನಲ್ಲಿದ್ದೇನೆ. ಚಿಕಿತ್ಸೆ ಮುಂದುವರೆದಿದೆ ಎಂದು ಹೇಳಿಕೊಂಡಿದ್ದಾರೆ.

ರಾಮಸೇತು ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಅಕ್ಷಯ್ ಸೋಂಕಿಗೀಡಾಗಿದ್ದು, ತಮ್ಮೊಂದಿಗೆ ಸಂಪರ್ಕದಲ್ಲಿದ್ದವರು ಕೂಡ ಪರೀಕ್ಷೆಗೊಳಗಾಗುವಂತೆ ಮನವಿ ಮಾಡಿದ್ದಾರೆ.

ಈವರೆಗೂ ಬಾಲಿವುಡ್‍ನ ರಣಬೀರ್ ಕಪೂರ್, ಅಲಿಯಾ ಭಟ್, ರೂಪಾಲಿ ಗಂಗೂಲಿ, ಕಾರ್ತಿಕ್ ಆರ್ಯನ್, ಅಮಿರ್‍ಖಾನ್, ಆದಿತ್ಯ ನಾರಾಯಣ್ ಸೇರಿದಂತೆ ಹಲವಾರು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡು ಚಿಕಿತ್ಸೆಗೊಳಗಾಗಿ ಗುಣಮುಖರಾಗಿದ್ದಾರೆ.

ರೋಹಿತ್ ಶೆಟ್ಟಿ ಅವರ ಸೂರ್ಯವಂಶಿ, ಆನಂದ್ ಎಲ್.ರೈ ಅವರ ಅಥ್ರಂಗಿರೇ, ಫರಾಗ್ ಸಮಾಜಿ ಅವರ ನಿರ್ದೇಶನದ ಬಚ್ಚನ್ ಪಾಂಡೆ, ರಂಜಿತ್ ತಿವಾರ ಅವರ ಬೆಲ್‍ಬಾಟಮ್, ಯಶ್ ರಾಜ್ ಫಿಲಂಸ್‍ನ ಪೃಥ್ವಿರಾಜ್ ಸೇರಿದಂತೆ ಅಕ್ಷಯ್ ಕುಮಾರ್ ನಟನೆಯ ಅನೇಕ ಚಿತ್ರಗಳು ಚಿತ್ರೀಕರಣದ ಹಂತದಲ್ಲಿವೆ.

Facebook Comments

Sri Raghav

Admin