ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ವಿರುದ್ಧ ದೂರು ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

Arman-Kohli

ಮುಂಬೈ, ಜೂ.5- ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ವಿರುದ್ಧ ದೈಹಿಕ ಹಲ್ಲೆ ಪ್ರಕರಣ ಸಂಬಂಧ ಮುಂಬೈನ ಸ್ಯಾಂಟಕ್ರೂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರೂಪದರ್ಶಿ ಹಾಗೂ ಕೊಹ್ಲಿಯೊಂದಿಗೆ ಲಿವಿಂಗ್ ಟು ಗೆದರ್ ಸಂಬಂಧದಲ್ಲಿದ್ದ ನೀರೂ ರಾಧಾವಾನ್ ಅವರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಅವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ಇತ್ತೀಚೆಗೆ ಹಣಕಾಸಿನ ವಿಷಯವಾಗಿ ಅರ್ಮಾನ್ ಕೊಹ್ಲಿ ಹಾಗೂ ನೀರೂ ನಡುವೆ ಹಣಕಾಸಿನ ವಿಚಾರದಲಲ್ಲಿ ಜಗಳವಾಗಿದ್ದು, ಅರ್ಮಾನ್ ಒಂದು ಹಂತದಲ್ಲಿ ಆಕೆಯನ್ನು ಮೆಟ್ಟಿಲ ಮೇಲಿಂದ ತಳ್ಳಿದ್ದಾನೆ, ಆ ವೇಳೆಯಲ್ಲಿ ಆಕೆಗೆ ಗಾಯಗಳಾಗಿವೆ. ಕೊಕಿಬಿನ್‍ದೀರೂಬಾಯ್ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೀರೂ ರಾಧಾವಾನ್ ಅವರು, ಕೊಹ್ಲಿ ನನ್ನ ಮೇಲೆ ದೈಹಿಕ ಹಲ್ಲೆ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ, ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಅರ್ಮಾನ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಅರ್ಮಾನ್ ಕೊಹ್ಲಿ ಅವರು ಖ್ಯಾತ ನಿರ್ಮಾಪಕ ರಾಜ್‍ಕುಮಾರ್ ಕೊಹ್ಲಿಯ ಪುತ್ರನಾಗಿದ್ದು, ವಿರೋಧಿ ಚಿತ್ರದ ಮೂಲಕ ಬಣ್ಣ ಹಚ್ಚಿದ ಕೊಹ್ಲಿ ನಂತರ ಜಾನಿ ದುಶ್ಮನ್, ಎಲ್‍ಒಸಿ ಕಾರ್ಗಿಲ್ ಚಿತ್ರಗಳಲ್ಲಿ ನಟಿಸಿದ್ದಾರೆ.

Facebook Comments

Sri Raghav

Admin