ಖ್ಯಾತ ಬಾಲಿವುಡ್ ನಟ ಬಿಕ್ರಮ್‌ಜೀತ್ ಕೊರೋನಾಗೆ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : ಮುಂಬೈ: ಹಿಂದಿ ಚಿತ್ರರಂಗದ ನಟ ಮೇಜರ್ ಬಿಕ್ರಮ್‌ಜೀತ್ ಕನ್ವರ್‌ಪಾಲ್ (52) ಅವರು ಕೋವಿಡ್‌ನಿಂದಾಗಿ ನಿಧನರಾದರು. ಕೋವಿಡ್‌ನಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ಸಮಸ್ಯೆ ತೀವ್ರಗೊಂಡಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು.

2003 ರಲ್ಲಿ ಭಾರತೀಯ ಸೇನೆಯಿಂದ ನಿವೃತ್ತಗೊಂಡ ನಂತರ ಅವರು ಬಾಲಿವುಡ್‌ ಪ್ರವೇಶಿಸಿದರು. ಬಿಕ್ರಮ್‌ಜೀತ್ ಕನ್ವರ್‌ಪಾಲ್‌ ಹಲವು ಸಿನಿಮಾಗಳು, ಒಟಿಟಿ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿದ್ದರು. ಪೇಜ್‌ 3, ‘ಅರಕ್ಷಣ್’, ‘ಪ್ರೇಮ್ ‌ರತನ್ ಧನ್ ಪಯೋ’, ‘ಜಬ್ ತಕ್ ಹೈ ಜಾನ್’ ಹಾಗೂ ‘2 ಸ್ಟೇಟ್ಸ್’ ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಅವರ ಕೊನೆಯ ಚಿತ್ರ ರಾಣಾ ದಗ್ಗುಬಾಟಿ ಹಾಗೂ ತಾಪ್ಸಿ ನಟಿಸಿದ ‘ದಿ ಘಾಜಿ ಅಟ್ಯಾಕ್’. ಬಿಕ್ರಮ್‌ಜೀತ್ ಕನ್ವರ್‌ಪಾಲ್‌ ಇತ್ತೀಚಿಗೆ ಕೋವಿಡ್ -19 ಸಮಸ್ಯೆಯಿಂದ ಬಳಲುತ್ತಿದ್ದರು. ಬಾಲಿವುಡ್ ಗಣ್ಯರು ಕನ್ವರ್‌ಪಾಲ್‌ ನಿಧನಕ್ಕೆ ಸಾಮಾಜಿಕ ಮಾಧ್ಯಮಗಳ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

‘ಪೇಜ್ 3’, ‘ರಾಕೆಟ್‌ಸಿಂಗ್‌’, ‘ಆರಕ್ಷಕನ್’, ‘ಮರ್ಡರ್‌-2’, ‘2 ಸ್ಟೇಟ್ಸ್’, ‘ಘಾಜಿ ಅಟ್ಯಾಕ್’, ‘ರಹಸ್ಯ್’ ಸೇರಿ ಸಾಕಷ್ಟು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚೆಗೆ ಡಿಸ್ನಿ ಹಾಟ್‌ಸ್ಟಾರ್‌ನ ವೆಬ್‌ಸಿರೀಸ್‌ನಲ್ಲಿ ನಟಿಸಿದ್ದರು. ಕಿರುತೆರೆ ಸರಣಿಗಳ ಪೋಷಕ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದರು.

Facebook Comments

Sri Raghav

Admin