ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಯುವನಟ ಧನ್ವೀರ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಅ.23- ಬಜಾರ್ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಗುರುತಿಸಿಕೊಂಡಿರುವ ಯುವನಟ ಧನ್ವೀರ್ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಂಡೀಪುರದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧವೇರಿದ್ದರೂ ಕೂಡ ಈ ನಿಯಮವನ್ನು ಉಲ್ಲಂಘಿಸಿ ಕಳೆದ ರಾತ್ರಿ ಧನ್ವೀರ್ ಸಫಾರಿ ಮಾಡಿರುವುದರಿಂದ ಅವರ ಮೇಲೆ ಸಾರ್ವಜನಿಕರ ಕೆಂಡಮಂಡಲವಾಗಿದ್ದಾರೆ.

ಸರ್ಕಾರ ಮಾಡುವ ನಿಯಮಗಳು ಕೇವಲ ಜನಸಾಮಾನ್ಯರಿಗೆ ಮಾತ್ರ ಅನ್ವಯವಾಗುತ್ತವೆಯೇ ಸೆಲಬ್ರೆಟಿಗಳಿಗೆ ಈ ನಿಯಮಗಳು ಅನ್ವಯವಾಗುವುದಿಲ್ಲವೇ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ. ನಟ ಧನ್ವೀರ್ ರಾತ್ರಿ ಬಂಡೀಪುರದ ಅಭಯರಾಣ್ಯದಲ್ಲಿ ಸಫಾರಿ ನಡೆಸಿದ ನಂತರ ತಮ್ಮ ಸಾಮಾಜಿಕ ಜಾಲಗಳಲ್ಲಿ ತಾನು ನೋಡಿದ ಹುಲಿ ಹಾಗೂ ಮತ್ತಿತರ ಪ್ರಾಣಿಗಳ ಬಗ್ಗೆ ಹಂಚಿಕೊಂಡಿದ್ದಾರೆ. ಈ ಸುದ್ದಿಯನ್ನು ನೋಡಿದಂತೆ ಸಾರ್ವಜನಿಕರು ಹೌಹಾರಿದ್ದಾರೆ.

ಬಂಡೀಪುರ ಅಭಯರಾಣ್ಯದಲ್ಲಿ ಸಾರ್ವಜನಿಕರ ನಿಷೇಧವಿದ್ದು ಈ ರಸ್ತೆಯಲ್ಲಿ ಸಂಚರಿಸುವಾಗ ವಾಹನಗಳನ್ನು ನಿಲ್ಲಿಸಿದರೆ ದಂಡ ಹಾಕುವ ಅಧಿಕಾರಿಗಳು ಸೆಲೆಬ್ರಿಟಿಗಳಿಗೆ ಮಾತ್ರ ರೆಡ್‍ಕಾರ್ಪೆಟ್ ಹಾಕಿ ಅವಕಾಶ ಕಲ್ಪಿಸಿಕೊಡುತ್ತಾರೆ, ಅವರಿಗೂ ಸಾರ್ವಜನಿಕರಿಗೆ ಇರುವಂತೆಯೇ ನಿಯಮಗಳನ್ನು ಹಾಕಿ ಅದನ್ನು ಮೀರಿದರೆ ಕಾನೂನು ಬಾಹಿರವಾಗಿ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments