ತಲೆಮರೆಸಿಕೊಂಡಿದ್ದ ನಟ ದುನಿಯಾ ವಿಜಯ್‍ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Duniya-Vijay--01

ಬೆಂಗಳೂರು, ಜೂ.8-ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ದೂರಿನನ್ವಯ ತಲೆಮರೆಸಿಕೊಂಡಿದ್ದ ನಟ ದುನಿಯಾ ವಿಜಯ್‍ರನ್ನು ತಮಿಳುನಾಡಿನ ಕೊಯಮತ್ತೂರು ಸಮೀಪ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕೊಯಮತ್ತೂರಿನ ರೆಸಾರ್ಟ್‍ನಲ್ಲಿ ದುನಿಯಾ ವಿಜಯ್ ಇರುವುದನ್ನು ಪತ್ತೆ ಹಚ್ಚಿದ ಪೊಲೀಸರು ಅವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆ ತರುತ್ತಿದ್ದಾರೆ.

ಮಾಸ್ತಿಗುಡಿ ಚಿತ್ರೀಕರಣದ ವೇಳೆ ಇಬ್ಬರು ಖಳನಾಯಕರ ದುರಂತ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸುಂದರ್‍ಗೌಡ ವಿರುದ್ಧ ವಾರೆಂಟ್ ಜಾರಿ ಮಾಡಿ ಅವರ ಬಂಧನಕ್ಕೆ ತಾವರೆಕೆರೆ ಠಾಣೆ ಪೊಲೀಸರು ಸಿಕೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿರುವ ಇವರ ಮನೆಗೆ ಹೋಗಿದ್ದರು. ಹೆಡ್‍ಕಾನ್ಸ್‍ಟೆಬಲ್ ಗೋವಿಂದರಾಜು ಹಾಗೂ ಇಬ್ಬರು ಕಾನ್ಸ್‍ಟೆಬಲ್‍ಗಳು ಸುಂದರ್‍ಗೌಡ ಮನೆಗೆ ಹೋಗಿದ್ದಾಗ ನಟ ದುನಿಯಾ ವಿಜಯ್ ಇವರ ಮನೆಗೆ ಬಂದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಸುಂದರ್‍ಗೌಡ ಪರಾರಿಯಾಗಲು ಸಹಾಯ ಮಾಡಿದ್ದರು.  ಈ ಬಗ್ಗೆ ಹೆಡ್‍ ಕಾನ್ಸ್ಟೆಬಲ್ ಗೋವಿಂದರಾಜು ಆವರು ಸಿಕೆ ಅಚ್ಚುಕಟ್ಟು ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ತಲೆಮರೆಸಿಕೊಂಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ದುನಿಯಾ ವಿಜಯ್ ಪತ್ತೆಗಾಗಿ ತಂಡ ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ ದುನಿಯಾ ವಿಜಯ್ ತಮಿಳುನಾಡಿನ ಕೊಯಮತ್ತೂರು ಬಳಿ ಇರುವುದನ್ನು ಪತ್ತೆಹಚ್ಚಿ ಅವರನ್ನು ವಶಕ್ಕೆ ಪಡೆದುಕೊಂಡಿದೆ.

Facebook Comments

Sri Raghav

Admin