ಮತ್ತೆ ವಿಚಾರಣೆಗೆ ಗೈರಾದ ನಟಿ ಜಾಕ್ವೇಲಿನ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.18- ನಟಿ ಜಾಕ್ವೇಲಿನ್ ಫರ್ನಾಂಡೀಸ್ ಮೂರನೇ ಬಾರಿಗೆ ಜಾರಿ ನಿರ್ದೇಶನಾಲಯದ ನೋಟಿಸ್‍ನ್ನು ದಾಟಿ ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ಕಾನ್ಮಾನ್ ಸುಖೇಶ್ ಚಂದ್ರ ಶೇಖರ್ ಮತ್ತು ಅವರ ಪತ್ನಿ ಮರಿಯಾ ಪೌಲ್ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾದ ಸುಮಾರು 200 ಕೋಟಿ ರೂಪಾಯಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೇಲಿನ್ ವಿಚಾರಣೆಗೆ ಇಡಿ ನೋಟಿಸ್ ನೀಡಿತ್ತು.

ಆದರೆ ವೃತ್ತಿಪರ ಕೆಲಸಗಳು ಇರುವುದರಿಂದ ಆಕೆ ಗೈರು ಹಾಜರಾಗಿದ್ದಾಳೆ ಎಂದು ಹೇಳಲಾಗಿದೆ. ಇಡಿ ಅಕಾರಿಗಳು ಮತ್ತೊಂದು ನೋಟಿಸ್ ನೀಡಿ, ಹೊಸದಾಗಿ ದಿನಾಂಕ ನಿಗದಿ ಪಡಿಸಲಿದ್ದಾರೆ ಎಂದು ಹೇಳಲಾಗಿದೆ.

ಜನರನ್ನು ಯಾಮಾರಿಸಿ ಹಣ ಸಂಗ್ರಹಿಸಿ ವಂಚಿಸಿದ ಈ ಪ್ರಕರಣ ದೆಹಲಿಯಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಹಗರಣದಲ್ಲಿ ಚಂದ್ರ ಶೇಖರ್ ಮತ್ತು ಅವರ ಪತ್ನಿಯನ್ನು ಬಂಧಿಸಲಾಗಿದೆ. ಹಲವು ಕಡೆ ಜಾರಿ ನಿರ್ದೇಶನಾಲಯ ದಾಳಿ ಮಾಡಿ ಹಲವಾರು ಸಾಕ್ಷ್ಯಗಳನ್ನು ಕಲೆ ಹಾಕಿದೆ. ದಾಳಿಯ ವೇಳೆ 82 ಲಕ್ಷ ನಗದು, ಡಜನ್‍ಗೂ ಹೆಚ್ಚು ಐಶರಾಮಿ ಕಾರುಗಳು ಪತ್ತೆಯಾಗಿದ್ದವು.

Facebook Comments