ಬಿಹಾರ ಚುನಾವಣೆ : ಶತ್ರುಘ್ನ ಸಿನ್ಹ ಪುತ್ರ-ನಟ ಲವ ಕಾಂಗ್ರೆಸ್ ಅಭ್ಯರ್ಥಿ

ಈ ಸುದ್ದಿಯನ್ನು ಶೇರ್ ಮಾಡಿ

ಪಾಟ್ನಾ, ಅ.16- ಹಿರಿಯ ಅಭಿನೇತ ಮತ್ತು ಕೇಂದ್ರದ ಮಾಜಿ ಸಚಿವ ಶತ್ರುಘ್ನ ಸಿನ್ಹ ಅವರ ಪುತ್ರ ಮತ್ತು ಚಿತ್ರನಟ ಲವ ಸಿನ್ಹ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದಾರೆ.

ಹೈವೋಲ್ಟೇಜ್ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಲವ ಸಿನ್ಹಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯಲಿದ್ದಾರೆ. ಬಿಹಾರದ ಪ್ರತಿಷ್ಠಿತ ಬಂಕಿಪೊರ್ ವಿಧಾನಸಭಾ ಕ್ಷೇತ್ರದಲ್ಲಿ ಅವರು ತಮ್ಮ ರಾಜಕೀಯ ರಂಗದ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲಿದ್ದಾರೆ.

ಈ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಸಿರುವ ಬಿಜೆಪಿ ಪ್ರಬಲ ಅಭ್ಯರ್ಥಿ ನಿತಿನ್ ನವೀನ್ ವಿರುದ್ಧ 37 ವರ್ಷದ ಚಿತ್ರ ನಟ ಸ್ರ್ಪಸಲಿದ್ದಾರೆ. ಹೀಗಾಗಿ ಈ ಕ್ಷೇತ್ರ ಮತ್ತಷ್ಟು ರಂಗೇರಿದೆ.

ಬಂಕಿಪೊರ್ ಕ್ಷೇತ್ರವು ಪಾಟ್ನಾ ಸಾಹೀಬ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಈ ಹಿಂದೆ ಶತ್ರುಘ್ನ ಸಿನ್ಹಾ ಎರಡು ಬಾರಿ ಈ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಅವರು 2009 ಮತ್ತು 2014ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಿಜೇತರಾಗಿ ಕೇಂದ್ರ ಸಚಿವರಾಗಿದ್ದರು.

74 ವರ್ಷದ ಶತ್ರುಘ್ನ ಸಿನ್ಹಾ, ಬಿಜೆಪಿ ತ್ಯಜಿಸಿ ಕಳೆದ ಸಂಸತ್ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಕಾಂಗ್ರೆಸ್ ಉಮೇದುವಾರರಾಗಿ ಸ್ರ್ಪಸಿದ್ದರು. ಅದರೆ, ಬಿಜೆಪಿಯ ರವಿಶಂಕರ್ ಪ್ರಸಾದ್ ವಿರುದ್ಧ ಪರಾಭವಗೊಂಡಿದ್ದರು.

243 ಕ್ಷೇತ್ರಗಳ ಬಿಹಾರ ವಿಧಾನಸಭೆಗೆ ಅ.28, ನ.3 ಮತ್ತು ನ.7ರಂದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನ.10ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

Facebook Comments

Sri Raghav

Admin