ಸುಶಾಂತ್ ಸಾವು ಪ್ರಕರಣ : ರಾಕುಲ್ ಪ್ರೀತ್‍ಗೆ ಎನ್‍ಸಿಬಿ ಡ್ರಿಲ್ : ದೀಪಿಕಾ, ಶ್ರದ್ಧಾಗೆ ಢವಢವ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.25- ಬಾಲಿವುಡ್‍ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್‍ಸಾವು ಪ್ರಕರಣ ಮತ್ತು ಮಾದಕ ವಸ್ತು ಜಾಲಕ್ಕೆ ಸಂಬಂಸಿದಂತೆ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಮಾದಕವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ) ಇಂದು ಬಹುಭಾಷಾ ನಟಿರಾಕುಲ್ ಪ್ರೀತ್‍ಅವರನ್ನು ವಿಚಾರಣೆಗೆ ಒಳಪಡಿಸಿದೆ.

ಮುಂಬೈನಲ್ಲಿರುವ ಎನ್‍ಸಿಬಿ ಕೇಂದ್ರ ಕಚೇರಿಯಲ್ಲಿ ಅಕಾರಿಗಳು ಇಂದು ಬೆಳಗ್ಗೆಯಿಂದ ರಾಕುಲ್ ಪ್ರೀತ್ ಮತ್ತು ಬಾಲಿವುಡ್‍ನ ಜನಪ್ರಿಯತಾರೆ ದೀಪಿಕಾ ಪಡುಕೋಣೆ ಅವರ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಅವರನ್ನು ಸುದೀರ್ಘ ವಿಚಾರಣೆ ನಡೆಸಿದೆ. ಬಾಲಿವುಡ್ ಸೂಪರ್‍ಸ್ಟಾರ್ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಶ್ರದ್ಧಾಕಪೂರ್‍ಅವರನ್ನು ನಾಳೆ ಶನಿವಾರ ಎನ್‍ಸಿಬಿ ತೀವ್ರ ವಿಚಾರಣೆಗೆ ಒಳಪಡಿಸಲಿದೆ.

ಸುಶಾಂತ್ ಸಾವಿ ಪ್ರಕರಣದಲ್ಲಿ ಡ್ರಗ್ಸ್ ಜಾಲದ ಸಂಪರ್ಕ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮತ್ತು ಮಾದಕವಸ್ತು ಬಳಕೆ ಸಂಬಂಧ ದೀಪಿಕಾ, ಶ್ರದ್ಧಾ, ರಾಕುಲ್, ಸಾರಾ ಅಲಿ ಖಾನ್, ಕರಿಷ್ಮಾ ಪ್ರಕಾಶ್ ಮತ್ತು ಫ್ಯಾಷನ್ ಡಿಸೈನರ್ ಸೈಮೊನೆ ಕಂಬಾಟಾ ಅವರಿಗೆ ಎನ್‍ಸಿಬಿ ಬುಧುವಾರ ನೋಟಿಸ್ ಮತ್ತು ಸಮನ್ಸ್‍ಗಳನ್ನು ಜಾರಿಗೊಳಿಸಿತ್ತು.

ಈ ನಟಿ ಮಣಿಯರು ಹೆಸರನ್ನು ಸುಶಾಂತ್ ಮಾಜಿ ಗೆಳತಿ ಮತ್ತು ನಟಿರಿಯಾಚಕ್ರವರ್ತಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದು, ಇವರು ವಾಟ್ಸ್‍ಆಫ್‍ಗಳಲ್ಲಿ ಡ್ರಗ್ಸ್ ಬಗ್ಗೆ ರಹಸ್ಯ ಸಂಕೇತದಲ್ಲಿ ಸಂದೇಶ ರವಾನಿಸಿದ ಪ್ರಕರಣದ ಸಂಬಂಧ ಎನ್‍ಸಿಬಿ ತನಿಖೆ ತೀವ್ರಗೊಳಿಸಿದೆ.

ಈ ಮಧ್ಯೆ ನಾಳೆ ದೀಪಿಕಾ ಪಡುಕೋಣೆ ಎನ್‍ಸಿಬಿ ಮುಂದೆ ವಿಚಾರಣೆ ಹಾಜರಾಗಲಿದ್ದಾರೆ. ಅವರು ನಿನ್ನೆರಾತ್ರಿತಮ್ಮ ಪತಿ-ಖ್ಯಾತ ನಟಿರಣಬೀರ್ ಸಿಂಗ್ ಅವರೊಂದಿಗೆಗೋವಾದಿಂದ ಮುಂಬೈಗೆ ಹಿಂದಿರುಗಿದ್ದಾರೆ. ಈ ಪ್ರಕರಣದಲ್ಲಿರಿಯಾ,ಆಕೆಯ ಸಹೋದರ ಸೌವಿಕ್ ಸೇರಿದಂತೆ ಈವರೆಗೆ 20ಕ್ಕೂ ಹೆಚ್ಚು ಜನರನ್ನು ಬಂಸಲಾಗಿದ್ದು, ವಿಚಾರಣೆ ಮತ್ತಷ್ಟು ತೀವ್ರಗೊಂಡಿದೆ.

ಸುಶಾಂತ್‍ಗೆಡ್ರಗ್ಸ್ ಪೂರೈಸುತ್ತಿದ್ದ ಆರೋಪದ ಸಂಬಂಧಬಂತರಾದÀ ಚಿತ್ರನಟಿರಿಯಾಚಕ್ರವರ್ತಿ ವಿಚಾರಣೆ ವೇಳೆ ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ) ಅಕಾರಿಗಳ ಮುಂದೆ ಮತ್ತಷ್ಟು ಸಂಗತಿಗಳನ್ನು ಈಗಾಗಲೇ ಬಹಿರಂಗಗೊಳಿಸಿದ್ದಾರೆ.

ಈ ಬಗ್ಗೆ ತನಿಖೆ ತೀವ್ರಗೊಳಿಸಿರುವ ತನಿಖಾ ಸಂಸ್ಥೆ ಪ್ರಕರಣದಲ್ಲಿ ಹೆಸರಿ ಸಲ್ಪಟ್ಟಿರುವವರ ಜಾಡು ಹಿಡಿದುತನಿಖೆ ನಡೆಸುತ್ತಿದ್ದು, ಇನ್ನೂ ಕೆಲವರು ಬಂಧನಕ್ಕೆ ಒಳಗಾಗುವ ನಿರೀಕ್ಷೆಇದೆ. ಸುಶಾಂತ್ ಸಾವು ಪ್ರಕರಣದಲ್ಲಿ ಡ್ರಗ್ಸ್ ಜಾಲದ ನಂಟು ಕೇಳಿ ಬಂದ ನಂತರ ತನಿಖೆಯ ಆಳ ಅಗೆದಷ್ಟು ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ.

Facebook Comments

Sri Raghav

Admin