ಬೈಕ್ ಅಪಘಾತ : ಪ್ರಾಣಾಪಾಯದಿಂದ ಪಾರಾದ ತೆಲುಗು ನಟ ಸಾಯಿ ಧರ್ಮತೇಜ್..!

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್, ಸೆ.11- ಮೆಗಾಸ್ಟಾರ್ ಚಿರಂಜೀವಿ ತಂಗಿ ಮಗ ಹಾಗೂ ಟಾಲಿವುಡ್ ಸುಪ್ರೀಂ ಹೀರೋ ಸಾಯಿ ಧರ್ಮತೇಜ್ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ಹೈದರಾಬಾದ್‍ನ ಮಾದಾಪುರ ಕೇಬಲ್ ಬ್ರಿಡ್ಜ್ ಮೇಲೆ ಸ್ಪೋಟ್ರ್ಸ್ ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ಆದರೆ, ಅದೃಷ್ಟವಶಾತ್ ಸಾಯಿ ಧರ್ಮತೇಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಣೇಶ ಹಬ್ಬದ ಪ್ರಯುಕ್ತ ಟ್ರಾಫಿಕ್ ಕಡಿಮೆ ಇದ್ದು, ಹಿಂದಿನಿಂದ ಭಾರೀ ವಾಹನಗಳು ಬರದಿದ್ದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ಸಾಯಿ ಧರ್ಮತೇಜ್‍ಗೆ ಅಪಘಾತ ಸಂಭವಿಸಿದ ಸುದ್ದಿ ತಿಳಿದ ಕೂಡಲೇ ಮಾವಂದಿರಾದ ಚಿರಂಜೀವಿ, ಪವನ್ ಕಲ್ಯಾಣ್ ಹಾಗೂ ತೆಲುಗು ನಾಯಕ ನಟರು, ಸ್ನೇಹಿತರು, ಅಭಿಮಾನಿಗಳು ಅಪೊಲೋ ಆಸ್ಪತ್ರೆ ಬಳಿ ಜಮಾಯಿಸಿದರು.

ಜ್ಯೂಬ್ಲಿ ಹಿಲ್ಸ್ ರಸ್ತೆ ನಂ.45ರಲ್ಲಿ ಕೇಬಲ್ ಬ್ರಿಡ್ಜ್, ಐಕೆಯು ಮಾರ್ಗವಾಗಿ ಸ್ಪೋಟ್ರ್ಸ್ ಬೈಕ್‍ನಲ್ಲಿ 120 ಕಿಮೀ ವೇಗದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ಸಾಯಿ ಧರ್ಮತೇಜ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಯಾವುದೇ ಪ್ರಾಣಾಪಾಯವಿಲ್ಲ. ಆದರೂ 48 ಗಂಟೆಗಳ ಕಾಲ ತೀವ್ರ ನಿಗಾಘಟಕದಲ್ಲಿಟ್ಟಿರುವುದಾಗಿ ಅಪೊಲೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

Facebook Comments