ನಟಿ ಶಿಲ್ಪಾಗೆ ಕೋವಿಡ್ ಪಾಸಿಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಡಿ.30- ಹಮ್, ಖುದಾ ಗವಾ ಮತ್ತು ಆಂಖೇಯಂತಹ ಚಲನಚಿತ್ರಗಳಿಗೆ ಹೆಸರಾದ ನಟಿ ಶಿಲ್ಪಾಶಿರೋಡ್ಕರ್ ತಮಗೆ ಕೋವಿಡ್-19 ಪಾಸಿಟಿವ್ ಇರುವುದಾಗಿ ಇಂದು ತಿಳಿಸಿದ್ದಾರೆ.

ತಮಗೆ ನಾಲ್ಕು ದಿನಗಳ ಹಿಂದೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು 1990ರ ದಶಕದ ಜನಪ್ರಿಯ ನಟಿ ಶಿಲ್ಪಾ ಎನ್‍ಸ್ಟಾಗ್ರಾಂನಲ್ಲಿ ಪೋಸ್ಟ್  ಮಾಡಿದ್ದಾರೆ.

4ನೇ ದಿನ ಕೋವಿಡ್ ಪಾಸಿಟಿವ್ ಎಂದು ಕೋವಿಡ್-19 ಲಸಿಕೆ ಪಡೆದ ಪ್ರಪ್ರಥಮ ಭಾರತೀಯ ಸೆಲೆಬ್ರಿಟಿಯಾಗಿರುವ ನಟಿ ಶಿಲ್ಪಾ ಬರೆದುಕೊಂಡಿದ್ದಾರೆ.

Facebook Comments