ನಾಗರಹಾವು ಚಿತ್ರಕ್ಕೆ ಪುಟ್ಟಣ್ಣ ಕಣಗಾಲ್ ವಿಷ್ಣು ಅವರನ್ನೇ ಸೆಲೆಕ್ಟ್ ಮಾಡಿದ್ದೇಕೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಎಸ್. ಶಿವರಾಮ್ (ಜನನ 1938), ಸರಳವಾಗಿ ಶಿವರಾಮ್ ಅಥವಾ ಶಿವರಮಣ್ಣ ಎಂದೇ ಗೌರವದಿಂದ ಕಾಣುತ್ತಾರೆ. ಒಬ್ಬ ಭಾರತೀಯ ನಟ, ನಿರ್ಮಾಪಕ ಮತ್ತು ನಿರ್ದೇಶಕನಾಗಿ ಅವರ ಕನ್ನಡ ಚಿತ್ರರಂಗವು ಆರು ದಶಕಗಳವರೆಗೆ ವ್ಯಾಪಿಸಿದೆ.

ಶಿವರಾಮಣ್ಣ ಹಾಸ್ಯ, ಪೋಷಕ ಪಾತ್ರ ಸೇರಿದಂತೆ ಡ್ರೈವರ್ ಹನುಮಂತು ಚಿತ್ರದಲ್ಲಿ ನಾಯಕನಾಗಿಯೂ ಕಾಣಿಸಿಕೊಂಡಿದ್ರು. ಶಿವರಾಮಣ್ಣ ತಮ್ಮ ಹಿರಿಯ ಸಹೋದರ ಎಸ್.ರಾಮನಾಥನ್ ಅವರೊಂದಿಗೆ ಸೇರಿ 1972 ರಲ್ಲಿ ಹೃದಯ ಸಂಗಮವನ್ನು ನಿರ್ದೇಶಿಸುವುದರ ಹೊರತಾಗಿ ರಾಶಿ ಬ್ರದರ್ಸ್ ಹೆಸರಿನಲ್ಲಿ ಹಲವಾರು ಚಲನಚಿತ್ರಗಳನ್ನು ನಿರ್ಮಿಸಿದ ಹೆಗ್ಗಳಿಕೆ ಸಹೋದರರಿಗೆ ಸಲ್ಲುತ್ತದೆ.

ಇಷ್ಟಾಗಿಯೂ ಸಹೋದರರು ಒಟ್ಟಾಗಿ ಕೆಲವು ಬಾಲಿವುಡ್ ಚಲನಚಿತ್ರಗಳನ್ನು ಸಹ ನಿರ್ಮಿಸಿದರು. ಆ ಪೈಕಿ ಸಹೋದರ ಎಸ್. ರಾಮನಾಥನ್ ನಿರ್ದೇಶನದ ‘ಬಾಂಬೆ ಟೂ ಗೋವಾ’ ಚಿತ್ರ ನಟ ಅಮೀತಾ ಬಚ್ಚನ್ ಅವರಿಗೆ ದೊಡ್ಡಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು.

ಇನ್ನೂ ಶಿವರಾಮಣ್ಣ ಅವರ ಕುರಿತು ಹೇಳುವುದಾದ್ರೆ ಪುಟ್ಟಣ್ಣ ಕಣಗಲ್ ಅವರೊಂದಿಗಿನ ಒಡನಾಟದ ಬಗ್ಗೆ ಬರೆಯುತ್ತಾ ಹೋದ್ರೆ ಪುಟಗಳೇ ಸಾಲದು, ಕನ್ನಡ ಹೆಸರಾಂತ ನಾಕ-ನಾಕಿಯರನ್ನು ಪರಿಚಯಿಸಿದ ಹೆಗ್ಗಳಿಗೆ ಇವರದು, ಆದರೇ ಅದನ್ನು ಎಂದಿಗೂ ಎಲ್ಲಿಯೂ ನಾನು, ನನ್ನಿಂದಲೇ ಅಂತ ಹೇಳಿಕೊಂಡವರಲ್ಲ.

ಒಟ್ಟಾರೆ ಚಿತ್ರರಂಗದ ಎಲ್ಲಾ ವಿಭಾಗಗಳಲ್ಲಿಯೂ ಕೆಲಸಮಾಡಿರುವು ಶಿವರಾಮಣ್ಣ ಉತ್ತಮ ವನ್ಯ ಜೀವಿ ಛಾಯಾಗ್ರಾಹಕರೂ ಕೂಡ ಹೌದು, ಕಲಿಕೆಗೆ ವಯಸ್ಸಿನ ಮಿತಿ ಎಲ್ಲ ಎನ್ನುವಂತೆ ಕೆಲ ವರ್ಷಗಳ ಹಿಂದೆಯಷ್ಟೇ ಎಂ.ಎ. ಪದವಿ ಗಳಿಸಿದ ಹೆಗ್ಗಳಿಕೆ ಇವರದು.

Facebook Comments

Sri Raghav

Admin