‘ಮದಗಜ’ ಚಿತ್ರದ ಶೂಟಿಂಗ್‍ ವೇಳೆ ಶ್ರೀಮುರಳಿ ಕಾಲಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.7- ಮದಗಜ ಶೂಟಿಂಗ್ ವೇಳೆ ನಟ ಶ್ರೀಮುರುಳಿ ಕಾಲಿಗೆ ಗಾಯವಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಸಾಹಸ ದೃಶ್ಯ ಚಿತ್ರೀಕರಣದ ಸಂದರ್ಭದಲ್ಲಿ ಗಾಯವಾಗಿದೆ ಎಂದು ಚಿತ್ರತಂಡ ಹೇಳಿದೆ. ಹೆಚ್ಚಿನ ಅಪಾಯವಾಗದಿದ್ದರೂ 15 ದಿನ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಮದಗಜ ಭಾರೀ ಬಜೆಟ್‍ನ ಚಿತ್ರವಾಗಿದ್ದು, ರಾಬರ್ಟ್ ಚಿತ್ರದ ನಿರ್ಮಾಪಕರೇ ಈ ಚಿತ್ರವನ್ನುತೆರೆಗೆ ತರುತ್ತಿದ್ದಾರೆ. ಮದಗಜದಲ್ಲಿ ಆಶಿಕಾರಂಗನಾಥ್, ಜಗಪತಿಬಾಬು ಸೇರಿದಂತೆ ಬಹುತಾರಾಣಗವಿದೆ.

Facebook Comments