ಖ್ಯಾತ ಹಾಸ್ಯನಟ ವಡಿವೇಲುಗೆ ಕೊರೊನಾ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಡಿ. 25- ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ವಡಿವೇಲು ಅವರಿಗೆ ಕೊರೊನಾ ಪಾಸಿಟಿವ್ ಆಗಿದ್ದು ಚಿಕಿತ್ಸೆಗಾಗಿ ಪೊರೂರ್‍ನಲ್ಲಿರುವ ಶ್ರೀ ರಾಮಚಂದ್ರ ವೈದ್ಯಕೀಯ ಸೆಂಟರ್‍ಗೆ ದಾಖಲಾಗಿದ್ದಾರೆ.ವಡಿವೇಲು ಅವರು ಇತ್ತೀಚೆಗೆ ಅಮೆರಿಕಾ ಪ್ರವಾಸದಿಂದ ಹಿಂದುರಿಗಿದ್ದು ಅವರನ್ನು ಪರೀಕ್ಷೆಗೊಳಪಡಿಸಿದಾಗ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಸ್ಪಷ್ಟವಾಗಿದ್ದು, ದಕ್ಷಿಣ ಆಫ್ರಿಕಾ ಮೂಲದ ಓಮಿಕ್ರಾನ್ ಕೂಡ ತಗುಲಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.

ವಡಿವೇಲು ಅವರಿಗೆ ಕೊರೊನಾ ಪಾಸಿಟಿವ್ ತಗುಲಿರುವ ವಿಷಯ ತಿಳಿದ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಶೀಘ್ರ ಗುಣಮುಖರಾಗಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾರೈಸಿದ್ದಾರೆ.ಅಭಿಮಾನಿಗಳಿಂದ ಪ್ರೀತಿಯಿಂದ ವೈಗೈ ಪುಯಾಲ್ ಎಂದು ಕರೆಯಲ್ಪಡುವ ವಡಿವೇಲು ಕೆಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದು ಈಗ ಮತ್ತೆ ನೈ ಶಿಖರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ವಡಿವೇಲು ಮರಳಲು ಸಜ್ಜಾಗಿರುವಾಗ ಅವರಿಗೆ ಕೊರೊನಾ ಪಾಸಿಟಿವ್ ತಗುಲಿದೆ.

ವಡಿವೇಲು ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ನೀಡಲು ಶ್ರೀ ರಾಮಚಂದ್ರ ವೈದ್ಯಕೀಯ ಸೆಂಟರ್‍ನ ವೈದ್ಯರು ನಿರಾಕರಿಸಿದ್ದು ಅವರ ಪರೀಕ್ಷೆಯ ಪೂರ್ಣ ಪ್ರಮಾಣದ ವರದಿ ಬಂದ ನಂತರವೇ ಅವರಿಗೆ ಓಮಿಕ್ರಾನ್ ಸೋಂಕು ತಗುಲಿದೆಯೋ? ಇಲ್ಲವೋ ಎಂಬುದು ಖಾತ್ರಿಯಾಗಲಿದೆ.

ಎನ್‍ತಂಗಿ ಕಲ್ಯಾಣಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದ ವಡಿವೇಲು ಚಿನ್ನಗೌಂಡರ್, ತೇವರ್ ಮಗನ್, ವಾಲಿ, ರಾಜಕುಮಾರನ್ ಮತ್ತಿತರ ಚಿತ್ರಗಳಲ್ಲಿ ತನ್ನ ಹಾಸ್ಯದ ಛಾಪು ಮೂಡಿಸಿದ್ದ ವಡಿವೇಲು ತೆನಾಲಿರಾಮನ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟನಾಗಿಯೂ ನಟಿಸಿದ್ದಾರೆ.

Facebook Comments

Sri Raghav

Admin