ನಟ ಭಯಂಕರ ವಜ್ರಮುನಿಯವರ 14 ನೇ ಪುಣ್ಯ ಸ್ಮರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ, ಜ.6- ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಕಾಳೇನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಹಳ್ಳಿಕಾರ್ ಯುವಕರ ಸಂಘದ ವತಿಯಿಂದ ಚಿತ್ರ ನಟ ವಜ್ರಮುನಿಯವರ 14 ಪುಣ್ಯ ಸ್ಮರಣೆ ಅಂಗವಾಗಿ ಗ್ರಾಮ ಘಟಕ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಜೆಡಿಎಸ್ ಪಕ್ಷದ ಯುವ ನಾಯಕ ಹಾಗೂ ಸಮಾಜ ಸೇವಕ ಎ.ಬಿ. ಕಿರಣ್ ಉದ್ಘಾಟಿಸಿ ಮಾತನಾಡಿ, ವಜ್ರಮುನಿಯವರು ಚಲನ ಚಿತ್ರದಲ್ಲಿ ಖಳನಾಯಕನಾಗಿ ತಮ್ಮದೇ ಚಾಪು ಮೂಡಿದವರು.

ನಿಜ ಜೀವನದಲ್ಲಿ ಮಾತ್ರ ಸಹೃದಯ ಮನುಷ್ಯ ಅವರು ಅಂತಹಾ ಮಹಾನ್ ವ್ಯಕ್ತಿಗಳ ಪುಣ್ಯ ಸ್ಮರಣೆಗೆ ಭಾಗವಹಿಸಿರುವುದು ನಮ್ಮೆಲ್ಲರ ಪುಣ್ಯ. ಅಲ್ಲದೇ ವಜ್ರಮುನಿ ಅವರ ಆರ್ಶಿವಾದ ದೊಂದಿಗೆ ಕರ್ನಾಟಕ ರಾಜ್ಯ ಹಳ್ಳಿಕಾರ್ ಯುವಕರ ಸಂಘದ ಗ್ರಾಮ ಘಟಕ್ಕೆ ಶುಭ ಕೋರಿದರು. ಸಂಘ-ಸಂಸ್ಥೆಗಳು ಸಮಾಜಕ್ಕೆ ಉತ್ತಮ ಕೆಲಸಗಳನ್ನು ಮಾಡುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಕೋಟಹಳ್ಳಿ ಶ್ರೀನಿವಾಸ್, ಕಾಯಿ ಮಂಜೇಗೌಡ, ಕರ್ನಾಟಕ ರಾಜ್ಯ ಹಳ್ಳಿಕಾರ್ ಯುವಕರ ಸಂಘದ ಅಧ್ಯಕ್ಷ ಯೋಗೇಶ್, ಪ್ರಧಾನ ಕಾರ್ಯದರ್ಶಿ ಹರೀಶ್ ಹಳ್ಳಿಕಾರ್, ಜಿಲ್ಲಾದ್ಯಕ್ಷ ಶಿವಣ್ಣ, ತಾಲ್ಲೂಕು ಅಧ್ಯಕ್ಷ ರಾಜೇಶ್, ಮುಖಂಡರಾದ ಜಾನೇಗೌಡ್ರು, ಸೊಳ್ಳೆರಪುರ ಬಾಲು, ಸೇರಿದಂತೆ ಮತ್ತಿತರ ಗಣ್ಯರು ಇದ್ದರು.

Facebook Comments